Banner Image

ಚಿಗರಿಮಳ ಪ್ರಕೃತಿ ಶಿಬಿರ

ಬೆಲೆ ಪ್ರಾರಂಭವಾಗುತ್ತದೆ
999
ಅವಳಿ ಹಂಚಿಕೆಯಲ್ಲಿ ಪ್ರತಿ ಕೋಣೆಗೆ

ಸಾಮಾನ್ಯ ಅವಲೋಕನ

ಬೆಳಗಾವಿ ನೇಚರ್ ಕ್ಯಾಂಪು, ಪುಣೆ-ಬೆಳಗಾವಿ ರಾಷ್ತ್ರೀಯ ಹೆದ್ದಾರಿ-4ರಲ್ಲಿ ಬೆಳಗಾವಿಯಿಂದ ಸುಮಾರು 18 ಕಿಲೋಮೀಟರುಗಳ ದೂರದಲ್ಲಿ ಇರುವಂತಹ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟಿನ ಇತ್ತೀಚಿನ ಹೊಚ್ಚಹೊಸದಾದಂತಹ ಹೋಟೆಲು ಆಸ್ತಿಯಾಗಿರುತ್ತದೆ. ಪ್ರವಾಸಿಗರು ಕ್ಯಾಂಪಿನ ಅನೇಕ ಚಟುವಟಿಕೆಗಳ ಜೊತೆಯ್ಲಲಿ ಪ್ರಕೃತಿಯ ಮಡಿಲಲ್ಲಿ ಒಂದು ಸೂಕ್ತವಾದಂತಹ ರೀತಿಯಲ್ಲಿ ತಂಗುವ ಅನುಭವವನ್ನು ಪ್ರವಾಸಿಗರು ಹೊಂದಬಹುದು. ಈ ಸ್ಥಳವು, ಈ ಹಿಂದೆ ಇಲ್ಲಿ ಜಿಂಕೆಗಳು ಇರುತ್ತಿದ್ದವಾದ್ದರಿಂದ ಛಿಗರಿಮಲ್ಲ ಎಂಬುದಾಗಿ ಪ್ರಸಿದ್ದವಾಗಿರುವುದು.ಸ್ಥಳೀಯವಾಗಿ ಲಭ್ಯವಿರುವ ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲಾಗಿರುವ 7 ಕಾಟೇಜುಗಳು ಎಲ್ಲಾ ಮೂಲ ಸೌಕರ್ಯಗಳ ಜೊತೆಯಲ್ಲಿ ಒಂದು ಆರಾಮದಾಯಕ ತಂಗುವಿಕೆಯ ಅನುಕೂಲತೆಯನ್ನು ನೀಡುತ್ತವೆ. ಬಫೇ ಊಟವು ಸರಳವಾಗಿರುತ್ತದೆಯಾದರು ರುಚಿಕರವಾಗಿರುತ್ತದೆ.  ಪ್ಯಾಕೇಜಿನ ಒಂದು ಭಾಗವಾಗಿ ಅದನ್ನು ಶುಚಿತ್ವದ ಕಡೆಗೆ ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಕ್ಯಾಂಪಿನಲ್ಲಿಯೇ ತಯಾರಿಸಲಾಗುವುದು.ಸ್ಥಳೀಯ ಸಿಹಿ ಖಾದ್ಯವಾಗಿರುವ “ಕುಂದ’ದ ರುಚಿ  ನೋಡುವುದನ್ನು ಮರೆಯಬೇಡಿ.

ಅನುಭವ

ಪ್ರಕೃತಿಯಲ್ಲಿ ನಡಿಗೆಗಳು ಮತ್ತು ಹಕ್ಕಿಗಳ ವೀಕ್ಷಣೆಯು ಛಗರಿಮಲ್ಲದಲ್ಲಿ ಮುಂಜಾವಿನ ವೇಳೆಯನ್ನು ಕಳೆಯಲು ಅತ್ಯುತ್ತಮ ಮಾರ್ಗವಾಗಿರುತ್ತದೆ.ಸ್ಥಳೀಯ ಸಸ್ಯವರ್ಗಗಳು, ಪ್ರಾಣಿವರ್ಗ ಹಾಗೂ ಪ್ರದೇಶದ ಸಂಸ್ಕೃತಿ, ಇವುಗಳ ಬಗ್ಗೆ ಅರಿತುಕೊಳ್ಳಲು ನಡಿಗೆಯು ಒಂದು ಅವಕಾಶವಾಗಿರುತ್ತದೆ. ಸಂಪೂರ್ಣ ಅನುಭವವನ್ನು ಪುನಶ್ಚೇತನಗೊಳಿಸಬಹುದು.ಕ್ಯಾಂಪಿನ ಸುತ್ತಮುತ್ತಲೂ ಒಂದು ವಿಸ್ತೃತ ರೀತಿಯ ಪಕ್ಷಿಗಳನ್ನು ಕಾಣಬಹುದು. ಕೀಟಗಳನ್ನು ಹಿಡಿಯುವ ಹಕ್ಕಿಗಳು, ಹೂವುಗಳನ್ನು ಕುಕ್ಕುವ ಹಕ್ಕಿಗಳು, ಎಲೆಗಳ ಹಕ್ಕಿಗಳು ಕೋಗಿಲೆಗಳು, ನವಿಲು ಮತ್ತು ಇನ್ನೂ ಅನೇಕ ಹಕ್ಕಿಗಳನ್ನು ಸಾಮಾನ್ಯವಾಗಿ ನೋಡಬಹುದು. ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಸಲುವಾಗಿ ನೀವು ಹತ್ತಿರದಲ್ಲಿಯೇ ಇರುವಂತಹ ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಭೇಟಿ ನೀಡಬಹುದು. ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಒಳಗೆ  ವೀಕ್ಷಣಾ ಸ್ಥಳದವರೆಗೆ ಒಂದು ಸುದೀರ್ಘ ನಡಿಗೆಯು ನೆನಪಿನಲ್ಲಿ ಉಳಿಯುವ ಅನುಭವವಾಗಿರುತ್ತದೆ. ನಮ್ಮ ಕ್ಯಾಂಪಿಗೆ ಸಮೀಪದಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಒಂದು ಭೇಟಿಯು  ಗಿಡಮರಗಳ ಬಗ್ಗೆ  ನಿಮ್ಮಲ್ಲಿ ಅರಿವನ್ನು ಸಹ ಮೂಡಿಸುತ್ತದೆ.ಕ್ಯಾಂಪಿನಿಂದ ಕೇವಲ 18 ಕಿಲೋಮೀಟರುಗಳ ದೂರದಲ್ಲಿರುವ ಬೆಳಗಾವಿ ನಗರವು ಶ್ರೀಮಂತವಾದಂತಹ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು  ಹೊಂದಿರುತ್ತದೆ. ಅನೇಕ ಐತಿಹಾಸಿಕ ದೇವಸ್ಥಾನಗಳು, ಮಸೀದಿಗಲು, ಚರ್ಚುಗಲು, ಬಸದಿಗಳು ಇವೆ, ಅವುಗಳನ್ನು ನೀವು ಆವಿಷ್ಕರಿಸಬಹುದು. ಬೆಳಗಾವಿ ನಗರವು ಭಾರತೀಯ ಸೈನ್ಯದ ಮಿಲಿಟರಿ ವಿಭಾಗದ ಮರಾಠಾ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟು 1922ರಿಂದಲೂ  ಚಿರಪರಿಚಿತವಾಗಿರುವ ಕೇಂದ್ರ ಸ್ಥಾನವಾಗಿರುತ್ತದೆ.ಮಳೆಗಾಲದಲ್ಲಿ ಹೆಸರುವಾಸಿಯಾದ ಗೋಕಾಕ್ ಜಲಪಾತವನ್ನು ವೀಕ್ಷಿಸಬೇಕು. ಘಟಪ್ರಭಾ ನದಿಯ ಜಲಧಾರೆಯು ನಮ್ಮ ಕ್ಯಾಂಪಿನಿಂದ 35 ಕಿಲೋಮೀಟರುಗಳ ದೂರದಲ್ಲಿರುವುದು.ಸಾಹಸಪ್ರಿಯರು ಗೊಡಚಿನಮಲ್ಕಿ ಜಲಪಾತಕ್ಕೆ ಭೇಟಿ ಕೊಡಬಹುದು.ಬೆಳಗಾವಿಯು ಒಂದು ವಿಮಾನ ನಿಲ್ದಾಣವನ್ನು ಹೊಂದಿರುವುದು. ಹಾಗೂ ರಸ್ತೆಯ ಮೂಲಕ ಮತ್ತು ಟ್ರೈನಿನ ಮೂಲಕ ಹೋಗಬಹುದು.

 

ಭೇಟಿ ನೀಡುವುದಕ್ಕೆ ಸೂಕ್ತ ಕಾಲ

“ಚಿಗರಿಮಲದ ಬೆಳಗಾವಿ ನೇಚರ್ ಕ್ಯಾಂಪಿಗೆ “ಬನ್ನಿ, ಪುನರ್-ಜನ್ಮ ಪಡೆಯಿರಿ.ಈ ಕಾಲದ ಸ್ಥಳವು ನೀವು ಕಂಡುಕೊಳ್ಳುವ ಸಲುವಾಗಿ ನಿರೀಕ್ಷಿಸುತ್ತಿರುವುದು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಕರ್ನಾಟಕದಲ್ಲಿನ ಹೊಸ ಪ್ರವಾಸಿ ಸ್ಥಳಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ಕ್ಯಾಂಪಿಗೆ ಎಲ್ಲಾ ಪ್ರವಾಸಿಗರುಗಳನ್ನು ಆಹ್ವಾನಿಸುತ್ತಿರುವುದು.

ಸಂಪರ್ಕ ಫಾರ್ಮ್

  ರೆಸಾರ್ಟ್ ಸಂಪರ್ಕ ಮಾಹಿತಿ

  ಬೆಳಗಾವಿ ಪ್ರಕೃತಿ ಶಿಬಿರ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎದುರು, ಚಿಗರಿಮಳ ಹಲಭಾವಿ ಗ್ರಾಮ, ಕಾಕತಿ ಬೆಳಗಾವಿ, ಕರ್ನಾಟಕ- 584127

  ಪ್ಯಾಕೇಜುಗಳು

  • Exterior
  • Interior
  • Interior
  • Exterior
  • Interior
  • Interior

  Cottage

  ಬೆಲೆ ಪ್ರಾರಂಭವಾಗುತ್ತದೆ
  999

  ಅವಳಿ-ಹಂಚಿಕೆ ಆಧಾರದ ಮೇಲೆ ಪ್ರತಿ ಕೋಣೆಗೆ ಸುಂಕಗಳು.

  ಗಮನಿಸಿ: ಸುಂಕಗಳು ಕ್ರಿಯಾತ್ಮಕವಾಗಿದ್ದು, ಪೂರ್ವ ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತದೆ.

  ಪ್ಯಾಕೇಜ್ ಒಳಗೊಂಡಿದೆ: ಕೇವಲ ಉಳಿದುಕೊಳ್ಳುವಿಕೆ

  ಆಹಾರ ಮತ್ತು ಜಿಎಸ್ಟಿ ಹೆಚ್ಚುವರಿ ವೆಚ್ಚದಲ್ಲಿ

  *ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: Cottage

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ

  ವಿವರ

  ದಿನ 1

   1:00 pm -

   ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು

   1:30 pm - 2:30 pm

   ಊಟ

   5:00 pm - 6:15 pm

   ಪ್ರಕೃತಿಯಲ್ಲಿ ನಡಿಗೆ

   6:45 pm - 7:00 pm

   ಚಹಾ / ಕಾಫಿ

   8:30 pm - 9:30 pm

   ರಾತ್ರಿಯಊಟ

  ದಿನ 2

   6:00 am - 6:15 am

   ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವುದಕ್ಕಾಗಿ ಕರೆ

   6:15 am - 6:30 am

   ಚಹಾ / ಕಾಫಿ

   7:00 am - 8:30 am

   ಪ್ರಕೃತಿಯಲ್ಲಿ ನಡಿಗೆ

   8:30 am - 9:00 am

   ಬೆಳಗಿನ ಉಪಾಹಾರ

   9:00 am - 10:15 am

   ರಾಣಿ ಚೆನಮ್ಮ ಮೃಗಾಲಯ ಭೇಟಿ

   10:30 am -

   ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
  • ಬ್ಯಾಂಕ್ ವಿವರಗಳು
   Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

  ಪ್ರಯಾಣ ಸಲಹೆಗಳು

  ಮಾರ್ಗ ನಕ್ಷೆ

  From

  ರಸ್ತೆಯ ಮೂಲಕ

  ರೆಸಾರ್ಟು ಬೆಂಗಳೂರಿನಿಂದ ಸುಮಾರು 522 ಕಿಲೋಮೀಟರುಗಳ ದೂರದಲ್ಲಿ ಹಾಗೂ ಮುಂಬೈಯಿಂದ ಸುಮಾರು 463 ಕಿಲೋಮೀಟರುಗಳ

  ರೈಲಿನ ಮೂಲಕ

  ಅತೀ ಸಮೀಪದ ರೈಲು ನಿಲ್ದಾಣವು ಬೆಳಗಾವಿ ಜಂಕ್ಷನ್ ಆಗಿದ್ದು ಪ್ರಮುಖ ನಗರಗಳಿಗೆ ಟ್ರೈನುಗಳ ಸಂಪರ್ಕವನ್ನು ಹೊಂದಿರುತ್ತದೆ.

  ವಿಮಾನದ ಮೂಲಕ

  ಬೆಳಗಾವಿ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದ್ದು ಭಾರತದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿರುತ್ತದೆ.

  (English) https://goo.gl/maps/kd9Yu2dSSqY152cG8


  ಮಾಡಬೇಕಾದ ಕೆಲಸಗಳು

  ಇನ್ನಷ್ಟು ಅನ್ವೇಷಿಸಿ

  ರೆಸಾರ್ಟ್

  ಫೇಸ್ಬುಕ್

  ಟ್ವಿಟರ್

  ಕೃತಿಸ್ವಾಮ್ಯ © 2021 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

  Top