ಕಳೆದ 10 ವರ್ಷಗಳಿಂದ ನಾವು ಕಾವೇರಿ, ಬಿಳಿಗಿರಿರಂಗನ ಬೆಟ್ಟಗಳು, ಭದ್ರಾ, ಇತ್ಯಾದಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಗೆ ಭೇಟಿ ನೀಡುತ್ತಿರುವೆವು. ಈ ರೆಸಾರ್ಟ್ ಗಳಲ್ಲಿ ಸಿಬ್ಬಂದಿಯು ನಮಗೆ ನೀಡಲಾದಂತಹ ಸೇವೆಗಳು ಮತ್ತು ವೈಯಕ್ತಿಕ/ವ್ಯಕ್ತಿಗತ ಗಮನಗಳ ಬಗ್ಗೆ ನಮ್ಮ ಅಗಾಧ ಮೆಚ್ಚುಗೆಯನ್ನು ಈ ಮೂಲಕ ದಾಖಲಿಸಲು ನಾನು ಇಚ್ಚಿಸುತ್ತಿರುವೆನು. ಪ್ರತ್ಯೇಕವಾಗಿ ಮತ್ತು ಸೌಹಾರ್ದತೆಯಿಂದ ಕೂಡಿದ ಮತ್ತು ಆತಿಥ್ಯಕ್ಕೆ ಗಮನಹರಿಸುವುದು ನಮ್ಮ ಅತ್ಯುಕ್ತೃಷ್ಟತೆಯಾಗಿರುತ್ತದೆ.
ಕೆ.ಎಸ್. ಡೇವಿಡ್ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು
ಗುಡ್ ರಿಕೆ ಗ್ರೂಪ್, ಕೆಮೆಲ್ಲಿಯ ಪಿ ಎಲ್ ಸಿ, ಯು.ಕೆ
“ನಿಮಗೆ ಧನ್ಯವಾದಗಳು ! ನಮಗೆ ಬನ್ನೇರುಘಟ್ಟದಲ್ಲಿ ಒಂದು ಅತ್ಯದ್ಭುತವಾದಂತಹ ಹಗಲು ಹೊತ್ತಿನ ಪ್ರವಾಸ ಕಾರ್ಯಕ್ರಮವಾಯಿತು. ನಿಮ್ಮ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಅತ್ಯುತ್ತಮ ವೃತ್ತಿಪರರಾಗಿರುವರು, ಪ್ರವಾಸಿಗರಿಗೆ ಸಹಾಯಕರಾಗಿರುವರು ಹಾಗೂ ಅತ್ಯಂತ ಸೌಜನ್ಯದಿಂದ ವರ್ತಿಸುವರು. ಉತ್ತಮ ಕೆಲಸವನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಿರಿ. ವನ್ಯಜೀವಿಗಳ ಸಂರಕ್ಷಣೆಯಲ್ಲಿ ನಿಮ್ಮ ಪ್ರಯತ್ನಗಳು ನೈಜ ರೀತಿಯಲ್ಲಿ ಮೆಚ್ಚತಕ್ಕದ್ದು ಹಾಗೂ ಅತ್ಯುಮೂಲ್ಯವಾದುದು ! ಕಂಡಿತವಾಗಿ ನಾವು ರಾತ್ರಿಯ ವೇಳೆ ತಂಗಲು ಪುನರಾಗಮಿಸುವೆವು”.
ರಾಹುಲ್ ದ್ರಾವಿಡ್, ಬೆಂಗಳೂರು