Banner Image

ಆನೆಗಳ ಚಟುವಟಿಕೆಗಳು

ಅವಲೋಕನ

ಆನೆಗಳ ಬಗ್ಗೆ ನಾವು ಪ್ರತಿಯೊಬ್ಬರಲ್ಲೂ ಇರುವಂತಹ ಮಗುವಿನ ಮನಸ್ಸು ಆನೆಗಳ ಬಗ್ಗೆ ಏನನ್ನು ಚಿಂತಿಸುತ್ತದೆ? ಅವುಗಳ ಬೃಹದಾಕಾರದ ಶರೀರಕ್ಕೆ ಪ್ರತಿಯಾಗಿ ಅವುಗಳು ತೋರುವ ಸೌಮ್ಯ ಮುಖಭಾವವೆ? ಅಥವಾ ನಮ್ಮ ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ನಾವು ಹೊಂದಿರುವಂತಹ ಸ್ವಭಾವಗಳೆ? ನಿಮ್ಮಲ್ಲಿರುವ ಆನೆಗಳ ಪ್ರೇಮಿಗಳಿಗೆ ದುಬಾರೆ ಆನೆಗಳ ಕ್ಯಾಂಪಿನ ಒಂದು ಅನುಭವವಾಗಲೇ ಬೇಕಿರುತ್ತದೆ. ಆನೆಗಳೊಂದಿಗಿನ ಕರ್ನಾಟಕದ ಇತಿಹಾಸವು ಬಹಳಷ್ಟು ಹಿಂದಿನ ಕಾಲದಿಂದಲೂ ಬಂದಿರುತ್ತದೆ ಹಾಗೂ ಪ್ರಸ್ತುತ ರಾಜ್ಯದ ಅರಣ್ಯ ಇಲಾಖೆಯು ವಿವಿಧ ಕ್ಯಾಂಪುಗಳಲ್ಲಿ ಸುಮಾರು 150 ಆನೆಗಳನ್ನು ಹೊಂದಿರುತ್ತದೆ. ಆದರೆ ಕೆಲವು ವರ್ಷಗಳ ಹಿಂದೆ, ಕಾಡಿನಿಂದ ತಂದ ಮರಗಳನ್ನು ಕತ್ತರಿಸಿ ಬಳಕೆಗೆ ಬರುವಂತೆ ಸಿದ್ಧಪಡಿಸುವ ಪ್ರಕಿಯೆಯನ್ನು (ಲಾಗ್ಗಿಂಗ್) ಮುಕ್ತಾಯಗೊಳಿಸಿದನಂತರ, ಆನೆಗಳು ಹೊಸದಾಗಿ ನಿರುದ್ಯೋಗಿಗಳಾಗಿದ್ದಂತಹ ಸಂದರ್ಭವು ಉದ್ಭವಿಸಿದ್ದಿತು.

ಪ್ರಸಿದ್ದ ಮೈಸೂರು ದಸರಾ ಮಹೋತ್ಸವಕ್ಕಾಗಿ ಆನೆಗಳಿಗೆ ತರಬೇತಿ ನೀಡುವ ದುಬಾರೆ ಕ್ಯಾಂಪು ಒಂದು ಹೊಸ ಕರೆಯನ್ನು ಕಂಡುಕೊಂಡಿತು.ಇಂದು, ಅದು ನೂರಾರು ಪ್ರವಾಸಿಗರು ತಮ್ಮ ಅತಿ ದೊಡ್ಡ ಕನಸನ್ನು ಮುಖಕ್ಕೆ ಮುಖ ಕೊಟ್ಟು (ಕಂಡಿತವಾಗಿ  ಅಕ್ಷರಶ:) ಆನೆಗಳೊಂದಿಗೆ ಆನಂದದಾಯಕವಾಗಿ ಕೆಲವು ಸಮಯ ಕಳೆಯುವ ಸ್ಥಳವಾಗಿರುತ್ತದೆ.

ರೆಸಾರ್ಟ್‌ಗಳಲ್ಲಿ ಚಟುವಟಿಕೆ

ರೆಸಾರ್ಟ್

ಫೇಸ್ಬುಕ್

ಟ್ವಿಟರ್

ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

Top

img
img