ಆಳವಾದ ಸಮುದ್ರದಲ್ಲಿ ದೋಣಿ ವಿಹಾರ ಪ್ಯಾಕೇಜನ್ನು ಒಳಗೊಂಡಂತೆ (ಡಾಲ್ಫಿನ್ ವೀಕ್ಷಣೆ) ಅಥವಾ ಸ್ಕೂಬಾ ಡೈವಿಂಗ್, ಸ್ನಾರ್ಕಲಿಂಗ್ – ಹೆಚ್ಚುವರಿ ಮೊತ್ತದ ಪಾವತಿ ಷರತ್ತಿಗೆ ಒಳಪಟ್ಟಂತೆ.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 18 ರೆಸಾರ್ಟ್ಗಳಲ್ಲಿ ವ್ಯಾಪಿಸಿರುವ 356 ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಸದಾಶಿವಗಡದ ಇತಿಹಾಸ
ಈ ಕೋಟೆಗೆ 1715ರಲ್ಲಿ ಬಸವಲಿಂಗರಾಜ್ ಎಂಬುವರು ತಮ್ಮ ತಂದೆ ಸದಾಶಿವಲಿಂಗರಾಜ್ ರವರ ಹೆಸರಿನಿಂದ ಸದಾಶಿವಗಡ ಎಂಬುದಾಗಿ ಹೆಸರಿಸಿದರು.ಅವರುಗಳು ಚಿತ್ತಕುಲ, ಸಿಂವೇಶ್ವರ (ಅಂಗಡಿ), ಕದ್ರ, ಕಡ್ವಾಡ, ಅಂಕೋಲ ಮತ್ತು ಕೆನರಾದ ಇತರೆ ಕೆಲವು ಭಾಗಗಳನ್ನು ಸೇರ್ಪಡೆಗೊಳಿಸಿಕೊಂಡನಂತರ ’ರಾಜ’ ಎಂಬುದಾಗಿ ಹೇಳಿಕೊಳ್ಳಲಪಟ್ಟಿದ್ದಂತಹ ಸೋಂದೆಯ ದಳವಾಯಿಗಳಾಗಿದ್ದರು.
ಮರಾಠಾ ಪ್ರಭಾವ
ದಕ್ಷಿಣದಲ್ಲಿ ಬೆಡ್ನೋರ್ ನಿಂದ ಹೊರಟು ತನ್ನ ಮಾರ್ಗ ಮಧ್ಯದಲ್ಲಿ ಗೋಕರ್ಣದ ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಛತ್ರಪತಿ ಶಿವಾಜಿ ಮಹಾರಾಜನು ಅಂಕೋಲ ವಶಪಡಿಸಿಕೊಂಡನು ಹಾಗೂ ಮರು ದಿನ ಕಾರವಾರಕ್ಕೆ ಬಂದನು. ಈಸ್ಟ್ ಇಂಡಿಯಾ ಕಂಪನಿ ಮತ್ತು ಬಿಜಾಪುರದ ಸರದಾರನಾಗಿದ್ದ ಶೇರ್ ಷಾ, ಇಬ್ಬರೂ ಈ ಅನಿರೀಕ್ಷಿತ ಬೆಳವಣಿಗೆಯಿಂದ ಎಚ್ಚೆತ್ತುಕೊಂಡರು. ಅವರುಗಳು ಒಂದು ಬೃಹತ್ ಮೊತ್ತವನ್ನು ಸಂಗ್ರಹಿಸಿದರು ಹಾಗೂ ಅದನ್ನು ಶಿವಾಜಿಗೆ ನೀಡುತ್ತಾ, ತಮ್ಮನ್ನು ಬಿಟ್ಟುಬಿಡುವಂತೆ ಪ್ರಾರ್ಥಿಸಿದರು. ತನ್ನ ಅಧಿಕಾರಕ್ಕೆ ಸಿಕ್ಕ ಮನ್ನಣೆಗೆ ತೃಪ್ತಿಹೊಂದಿದ ಶಿವಾಜಿಯು ಕಾಳಿ ನದಿಯನ್ನು ದಾಡಿದನು ಹಾಗೂ 21 ಫೆಬ್ರವರಿ 1665ರಂದು ಸದಾಶಿವಗಡವನ್ನು ವಶಪಡಿಸಿಕೊಂಡನು.
ಕೇವಲ ಉಳಿದುಕೊಳ್ಳುವಿಕೆ ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ ಮತ್ತು ಹೆಚ್ಚುವರಿ ವ್ಯಕ್ತಿಗೆ ರೂ.500/-. ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಫಾರಿ ಚಟುವಟಿಕೆಗಳು, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಜಿಎಸ್ಟಿ 18% ಹೆಚ್ಚುವರಿ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಸ್ವಾಗತ ಪಾನೀಯ, 3 ಬಫೇ ಊಟಗಳು,ಕ್ಯಾಂಪ್ ಫೈರ್ ನೊಂದಿಗೆ ಸಂಜೆ ಬಾರ್ಬೇಕ್ಯೂ ಜೊತೆಯಲ್ಲಿ ಕ್ಯಾಂಪ್ ಫೈರ್, ಬೆಳಿಗ್ಗೆ ಮತ್ತು ಸಂಜೆ ಟೀ/ಕಾಫೀ, ಝಿಪ್-ಲೈನ್, ಪ್ರಕೃತಿಯಲ್ಲಿ ನಡಿಗೆ ಹಾಗೂ ಕೊರಕ್ಲೆ ಸವಾರಿ, ಡಾಲ್ಫಿನ್ ವೀಕ್ಷಣೆ (ಕ್ಯಾಂಪ್ ಸ್ಥಳದಲ್ಲಿ ನಡೆಯುವ ಇತರೆ ಎಲ್ಲಾ ಸಾಹಸಕ್ರೀಡೆ ಚಟುವಟಿಕೆಗಳು ಹೆಚ್ಚುವರಿ ಪಾವತಿಯನ್ನು ಮಾಡುವ ಆಧಾರದ ಮೇರೆಗೆ ಆಗಿರುತ್ತದೆ) ಹಾಗೂ ಜಿ ಎಸ್ ಟಿ 18%.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ದೇವಬಾಗ ದ್ವೀಪ ಕಡಲತೀರದ ರೆಸಾರ್ಟಿಗೆ ಭೇಟಿ
ದೇವಬಾಗ ಕಡಲತೀರದ ರೆಸಾರ್ಟ್ ನಲ್ಲಿ ಊಟ ಬಫೆ (ಸಮುದ್ರದ ಅಹಾರವೂ ಸೇರಿದಂತೆ)
ಟೀ/ಕಾಫಿ ಲಘು ಉಪಹಾರ
ಜಲ ಸಾಹಸ ಕ್ರೀಡೆಗಳು ಹೆಚ್ಚುವರಿ ಮೊತ್ತದ ಪಾವತಿ ಷರತ್ತಿನ ಮೇರೆಗೆ (ಬನಾನಾ ದೋಣಿ, ಜೆಟ್ಸಿ, ವೇಗದ ದೋಣಿ, ಏರಿಳಿತಗಳ ಸವಾರಿ, ಕಯಾಕಿಂಗ್ ಸವಾರಿ)
(ಕಡಲತೀರದಲ್ಲಿ ಈಜು, ಕಡಲತೀರದ ವಾಲ್ಲೀ ಬಾಲ್ – ಉಚಿತ), ಏರೋ ಆಟಗಳು – ಹೆಚ್ಚುವರಿ ಮೊತ್ತದ ಪಾವತಿಯ ಷರತ್ತಿಗೆ ಒಳಪಟ್ಟಂತೆ (ಪೆರಮೋಟಾರ್, ಪ್ಯಾರಾಸೈಲಿಂಗ್)
ಸದಾಶಿವಗಡ ಫೋರ್ಟ್ ರೆಸಾರ್ಟಿಗೆ ಹಿಂತಿರುಗುವುದು
ಸದಾಶಿವಗಡ ಫೋರ್ಟ್ ರೆಸಾರ್ಟಿನ ಬೆಟ್ಟದ ಮೇಲೆ ಕ್ಯಾಂಪ್ ಬೊನ್ ಫೈರ್ ಹಾಗೂ ಬಾರ್ಬೇಕ್ಯೂ (ಪಾನೀಯಗಳು ಮತ್ತು ಮದ್ಯಪಾನಗಳು – ಹೆಚ್ಚುವರಿ ಮೊತ್ತದ ಪಾವತಿ ಷರತ್ತಿಗೆ ಒಳಪಟ್ಟಂತೆ)
ಸದಾಶಿವಗಡದ ಊಟದ ಕೊಠಡಿಯಲ್ಲಿ ರಾತ್ರಿ ಊಟ ಬಫೆ (ಕೋಳಿ ಮತ್ತು ಸಮುದ್ರ ಆಹಾರವೂ ಸೇರಿದಂತೆ)
ಊಟದ ದೊಡ್ಡ ಕೊಠಡಿಯಲ್ಲಿ ಟೀ/ಕಾಫಿ ಹಾಗೂ ಬಿಸ್ಕತ್ತು
ಊಟದ ದೊಡ್ಡ ಕೊಠಡಿಯಲ್ಲಿ ಬೆಳಗ್ಗಿನ ಉಪಹಾರ
ಆಳವಾದ ಸಮುದ್ರದಲ್ಲಿ ದೋಣಿ ವಿಹಾರ ಪ್ಯಾಕೇಜನ್ನು ಒಳಗೊಂಡಂತೆ (ಡಾಲ್ಫಿನ್ ವೀಕ್ಷಣೆ) ಅಥವಾ ಸ್ಕೂಬಾ ಡೈವಿಂಗ್, ಸ್ನಾರ್ಕಲಿಂಗ್ – ಹೆಚ್ಚುವರಿ ಮೊತ್ತದ ಪಾವತಿ ಷರತ್ತಿಗೆ ಒಳಪಟ್ಟಂತೆ.
ಪ್ರವಾಸ ಮುಕ್ತಾಯವಾಗುತ್ತದೆ – ಲಾಡ್ಜಿನಿಂದ ಹೊರಡುವುದು.
(English)