ದೇವಬಾಗ ಕಡಲತೀರದಲ್ಲಿ ಒಂದು ಬಂಪರ್ ದೋಣಿ ಸವಾರಿಯನ್ನು ಮಾಡದೆಯೇ ಒಂದು ಉತ್ತೇಜಕ ಜಲ ಸಾಹಸಕ್ರೀಡೆಯು ಪರಿಪೂರ್ಣಗೊಳ್ಳುವುದಿಲ್ಲ. ನೀವು ಜೆಟ್ ಸ್ಕೈಯಿಂಗ್, ಸ್ನಾರ್ಕಿಲಿಂಗ್, ಪ್ಯಾರಾಸೈಲಿಂಗ್ ಮತ್ತು ಇತರೆ ಅಂತಹುದೇ ಜಲ ಸಾಹಸಕ್ರೀಡೆಗಳಲ್ಲಿ ಭಾಗವಹಿಸಿದ್ದಲ್ಲಿ , ಬಂಪರ್ ದೋಣಿ ಸವಾರಿಯು ನಿಮಗಾಗಿಯೇ ಆಗಿರುವುದು. ಒಂದು ದೊಡ್ಡ ಗಾಳಿ ತುಂಬಿದ ರಬ್ಬರ್ ಕೊಳವೆಯಲ್ಲಿ ನಿಮ್ಮನ್ನು ಕುಳ್ಳಿರಿಸಿ ಹಾಗೂ ಒಂದು ವೇಗವಾಗಿ ಚಲಿಸುವ ದೋಡಿಯಿಂದ ಮುಕ್ತ ಸಮುದ್ರಕ್ಕೆ ಎಳೆದುಕೊಂಡು ಹೋಗಲಾಗುವ ಈ ರೋಮಾಂಚಕ ಸವಾರಿಯನ್ನು ಆನಂದಿಸಿರಿ. ಟ್ಯೂಬಿಂಗ್ ಎಂಬುದಾಗಿಯೂ ಪರಿಚಿತವಾಗಿರುವ ಈ ಸವಾರಿಯ ಪ್ರಮುಖ ಉದ್ದೇಶವು ಅಲೆಗಳ ಅಡ್ಡಲಾಗಿ ವೇಗವಾಗಿ ಚಲಿಸುತ್ತಿರುವ ದೋಣಿಯು ನಿಮ್ಮನ್ನು ಬೀಳಿಸಲು ಪ್ರಯತ್ನಿಸುತ್ತಿರುವ ವೇಳೆಯಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಟ್ಯೂಬಿನಲ್ಲಿ ಕುಳಿತಿರುವುದಕ್ಕೆ ಪ್ರಯತ್ನಿಸುವುದಾಗಿರುತ್ತದೆ.
ಒಬ್ಬರಿಗೆ | ಇಬ್ಬರಿಗೆ |
ರೂ. 550/- ಎಲ್ಲಾ ಒಳಗೊಂಡು | ರೂ. 800/- ಎಲ್ಲಾ ಒಳಗೊಂಡು |