ಕಾಳಿನದಿಯಲ್ಲಿ ದೋಣಿ ವಿಹಾರದಲ್ಲಿ ಮೃದುವಾಗಿ ಪೆಡಲ್ ಮಾಡುವುದರಿಂದ ನಿಮ್ಮ ಜಡ ಮನಸ್ಸಿನಿಂದ ಹೊರಬರುವಿರಿ. ಅದು ನಿಮ್ಮ ಮನಸ್ಸನ್ನು ಪುನಶ್ಚೈತನ್ಯಗೊಳಿಸುವ ಅನುಭವ ಹಾಗೂ ಅದು ಅದರ ಪರಿಶುದ್ಧ ರೂಪದಲ್ಲಿ ನಿಮಗೆ ನಿರಾಕುಲತೆ ಅಥವಾ ಶಾಂತಚಿತ್ತತೆಯನ್ನು ತೋರಿಸುತ್ತದೆ. ನಾವೆಲ್ಲರೂ ಅದ್ಭುತ ಮೋಡಿಯನ್ನು ಪ್ರೀತಿಸುತ್ತೇವೆ ಹಾಗೂ ನಾವು ಅದಕ್ಕಾಗಿ ಯಾಚಿಸುತ್ತೇವೆ. ಇಲ್ಲಿನ ಈ ಚಟುವಟಿಕೆಯು ಅದಕ್ಕಾಗಿಯೇ ಆಗಿರುತ್ತದೆ. ಪ್ರಕೃತಿ ಮಾತೆಯ ಮನಮೋಹಕ ಸೌಂದರ್ಯವನ್ನು ಆಸ್ವಾಧಿಸಿಕೊಂಡಷ್ಟೂ ಸಾಕೆನಿಸುವುದಿಲ್ಲ. ನಿಮ್ಮ ಪ್ರವಾಸದ ಅತ್ಯುತ್ತಮ ಭಾಗವೆಂದರೆ ಕಾಳಿ ನದಿಯ ಹಿನ್ನೀರಿನಲ್ಲಿ ಮರಗಿಡಗಳ ಪೊದೆಗಳು ಹಾಗೂ ಹಕ್ಕಿಗಳನ್ನು ವೀಕ್ಷಿಸುತ್ತ ಕಯಾಕ್ ದೋಣಿ ಸವಾರಿ ಮಾಡುವುದು ನಿಮ್ಮ ಕಣ್ಣುಗಳಿಗೆ ಆನಂದದಾಯಕವಾಗಿರುತ್ತದೆ ಹಾಗೂ ನಿಷ್ಕಳಂಕ/ಮಲಿನವಾಗಿಲ್ಲದ ಪ್ರಕೃತಿಯ ನೈಜ ಸೌಂದರ್ಯದಲ್ಲಿ ನೀವು ಮುಳುಗಬಹುದು.
ಈ ಸುಂದರವಾದ ಪ್ರಕೃತಿ ಚಿಕಿತ್ಸೆಯಲ್ಲಿ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿರಿ. ಪ್ರಕೃತಿಯಲ್ಲಿನ ಸುಂದರ ಭೂ ಇಳಿಜಾರುಗಳನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಕರೆದುಕೊಂಡು ಹೋಗುವಿರಿ. ಅದನ್ನು ಆಸ್ವಾಧಿಸಿರಿ, ನಿಮ್ಮ ಜೊತೆಯಲ್ಲಿ ಕರೆದೊಯ್ಯಿರಿ. ಅದುವೇ ನಿಮಗೆ ಯಾವಾಗಲೂ ಅಗತ್ಯವಿರುವ ಪ್ರಶಾಂತತೆ ಅಥವಾ ನಿರಾಕುಲತೆ.