ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಭೀಮಗಡ ಸಾಹಸಕ್ರೀಡೆಗಳ (ಅಡ್ವೆಂಚರ್) ಕ್ಯಾಂಪು ಬೆಳಗಾವಿಯಿಂದ ಕೇವಲ 10 ಕಿಮೀಗಳ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲಿರುವುದು. ನಿರಾಕುಲತೆ ಅಥವಾ ಪ್ರಶಾಂತತೆಯನ್ನು ಆನಂದಿಸುವ ಸಲುವಾಗಿ ಇದು ಒಂದು ಅತ್ಯಂತ ಸೂಕ್ತ ಸ್ಥಳವಾಗಿರುತ್ತದೆ. ಕ್ಯಾಂಪು ಇರುವ ರಸ್ತೆಯ ಎದುರು ಬದಿಯಲ್ಲಿ ಹೆಸರಾಂತ ಬೆಳಗಾವಿ ಗಾಲ್ಫ್ ಕೋರ್ಸು ಇರುವುದು. ಈ ನಿಟ್ಟಿನಲ್ಲಿ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಚ್ಛಿಸುವವರಿಗೆ, ಇದು ಒಂದು ಅತ್ಯಂತ ಸೂಕ್ತವಾದ ಸ್ಥಳವಾಗಿರುತ್ತದೆ.
ಖಾನಾಪುರದಲ್ಲಿರುವ ಭೀಮಗಡ ಸಾಹಸಕ್ರೀಡೆಗಳ ಕ್ಯಾಂಪು ಪಶ್ಚಿಮ ಘಟ್ಟಗಳಿಗೆ ಸಮೀಪವಾಗಿರುವುದು ಹಾಗೂ ಗೋವಾ, ಖೊಲ್ಹಾಪುರ ಮತ್ತು ಹುಬ್ಬಳ್ಳಿಯಿಂದ ಎರಡು ಗಂಟೆಗಳ ಚಾಲನೆಯ ಒಳಗೆ ಇಲ್ಲಿಗೆ ತಲುಪಬಹುದು. ವ್ರಾಂಘ್ಟನ್ ಫ್ರೀ-ಟೈಲ್ಡ್ ಬಾವುಲಿಗಳಿಗೆ ಹೆಸರುವಾಸಿಯಾಗಿರುವಂತಹ ಭೀಮಗಡ ವನ್ಯಜೀವಿ ಅಭಯಾರಣ್ಯದಿಂದ ಈ ಹೆಸರನ್ನು ಇಡಲಾಗಿರುವುದು.
ಭೀಮಗಡ ಸಾಹಸಕ್ರೀಡೆಗಳ ಕ್ಯಾಂಪಿನಲ್ಲಿ ತಂಗಿರುವ ಸಮಯದಲ್ಲಿ, ಪಶ್ಚಿಮ ಘಟ್ಟಗಳ ಸುಂದರ-ರಮಣೀಯ ಭಾಗಗಳನ್ನು ಕಂಡುಕೊಳ್ಳಬಹುದು ಅಥವಾ ಅನ್ವೇಷಣೆ ಮಾಡಬಹುದು.
ನೀವು ಸಮೀಪದ ಅರಣ್ಯಕ್ಕೆ ಹಾಗೂ ನೀರಿನ ತೊರೆಗೆ ಭೇಟಿ ನೀಡಬಹುದು, ವೈವಿಧ್ಯಮಯ ಹಕ್ಕಿಪಕ್ಷಿಗಳನ್ನು ವೀಕ್ಷಿಸುವುದರಲ್ಲಿ ಮಗ್ನರಾಗಿರಿ – ವೆಲ್ವೆಟ್ ಮುಂಬಾಗವನ್ನು ಹೊಂದಿರುವ ಕಾಯಿದಿನಿ ಅಥವಾ ನಟ್ ಹ್ಯಾಚ್ , ಮಲಬಾರ್ ಬೂದುಬಣ್ಣದ ಹಾರ್ನ್ ಬಿಲ್, ಇಂಪೀರಿಯಲ್ ಪಾರಿವಾಳ, ಎಮರಾಲ್ಡ್ ಕೊಕ್ಕರೆ ಅಥವಾ ಪ್ರಾಯಶ: ಮಲಬಾರ್ ಟ್ರೋಗಾನ್, ಇವೇ ಮುಂತಾದ ಅತ್ಯಂತ ಸುಂದರ ಪಕ್ಷಿಗಳು ನಿಮಗೆ ಆನಂದವನ್ನು ನೀಡುವವು.
ರಾಜಹಂಸ ಕೋಟೆಯಿಂದ ಒಂದು ಸುಂದರ ದೃಶ್ಯಾತ್ಮಕ ವೀಕ್ಷಣೆಯಾಗಿರುವ ಬೆಳಗಾವಿ ಕೋಟೆಯನ್ನು ಅನ್ವೇಷಿಸಬಹುದು., ಕುಂಬಾರಿಕೆ ಸಂಸ್ಥೆಯಲ್ಲಿ ಕುಂಬಾರಿಕೆ/ಮಡಿಕೆ-ಕುಡಿಕೆಗಳನ್ನು ಮಾಡುವ ಕಲೆಯಲ್ಲಿ ನಿಮ್ಮ ಕೈಚಳಕವನ್ನು ಪರೀಕ್ಷಿಸಬಹುದು ಹಾಗೂ ನಿಮ್ಮ ಸ್ವಂತ ಆಸಕ್ತಿಯ ಮೇರೆಗೆ, ಸುರಲ್ ಜಲಪಾತಗಳು, ಅಂಬೋಲಿ ಜಲಪಾತಗಳು ಮತ್ತು ಗೋಕಾಕ ಜಲಪಾತಗಳನ್ನು ವೀಕ್ಷಿಸಿ ನಿಮ್ಮ ಮನಸ್ಸಂತೋಷಪಡಿಸಿಕೊಳ್ಳಬಹುದು.
ಬೆಳಗಾವಿಯು ವರ್ಷ ಪೂರ್ತಿ ಒಂದು ಆಹ್ಲಾದಕರ ವಾತಾವರಣವನ್ನು ಆನಂದಿಸುವುದು.
ಛಳಿಗಾಲದಲ್ಲಿ ಗಾಳಿಯಲ್ಲಿ ಹೆಚ್ಚಿನ ತಂಡಿಯಿರುತ್ತದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬೆಚ್ಚಗಿನ ವಾತಾವರಣವಿರುತ್ತದೆ. ಮಳೆಗಾಲದ ತಿಂಗಳುಗಳು ಮಳೆಯನ್ನು ಆನಂದಿಸಲು ಸೂಕ್ತವಾಗಿರುತ್ತವೆ.
ದರಪಟ್ಟಿಗಳು ಓರ್ವ ವ್ಯಕ್ತಿಗೆ ಒಂದು ರಾತ್ರಿಗೆ – ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದಮೇರೆಗೆ ಆಗಿರುತ್ತವೆ.
ಹೆಚ್ಚುವರಿ ವಯಸ್ಕರಿಗೆ 800 ರೂ,ಹೆಚ್ಚುವರಿ ಮಗುವಿಗೆ 500 ರೂ
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್‌ನೊಂದಿಗೆ ಮಾತ್ರ ಉಳಿಯಿರಿ ಮತ್ತು GST 12% ಹೊರತುಪಡಿಸಿ
(English) Check in . Settle down and freshen up
(English) Treat yourself to a sumptuous lunch at the Gol Ghar (on Extra charge)
(English) Our naturalists take you to Rajhansgad fort (on Extra charge)
(English) Tea/ coffee
(English) Bask in the warmth of the campfire, while you dine in the Gol Ghar (on extra charge), exchanging tales of the jungle with the other guests and our staff
(English) Wake up call
(English) Nature Walk
(English) Complementary breakfast
(English) Check out
ರೆಸಾರ್ಟು ಬೆಂಗಳೂರಿನಿಂದ ಸುಮಾರು 505 ಕಿಲೋಮೀಟರುಗಳ ದೂರದಲ್ಲಿ ಹಾಗೂ ಮುಂಬೈಯಿಂದ ಸುಮಾರು 502 ಕಿಲೋಮೀಟರುಗಳ
ಅತೀ ಸಮೀಪದ ರೈಲು ನಿಲ್ದಾಣವು ಬೆಳಗಾವಿ ಜಂಕ್ಷನ್ ಆಗಿದ್ದು ಪ್ರಮುಖ ನಗರಗಳಿಗೆ ಟ್ರೈನುಗಳ ಸಂಪರ್ಕವನ್ನು ಹೊಂದಿರುತ್ತದೆ.
ಬೆಳಗಾವಿ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದ್ದು ಭಾರತದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿರುತ್ತದೆ.
(English) Banglore to Bhimgad Adventure Camp – https://g.page/southern-star-belgaum?share