ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನದ ಉತ್ತರ ತುದಿಯಲ್ಲಿರುವಂತಹ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟಿನ ಕಿಂಗ್ಸ್ ಸಾಂಚುಯರಿಯು ಮೈಸೂರಿನಿಂದ ಕೇವಲ ಒಂದು ಗಂಟೆಯ ಹಾಗೂ ಬೆಂಗಳೂರಿನಿಂದ ನಾಲ್ಕು ಗಂಟೆಗಳ ಚಾಲನೆಯ ದೂರದಲ್ಲಿರುವುದು. ಮೀಸಲು ಅರಣ್ಯವು ಅನೇಕ ಸಸ್ತನಿ ಪ್ರಾಣಿಗಳು, ಸರೀಸೃಪಗಳು ಮತ್ತು ಪಕ್ಷಿಗಳೊಂದಿಗೆ ಹುಲಿಗಳು, ಚಿರತೆಗಳು, ಏಷಿಯಾದ ಆನೆಗಳು ಹಾಗೂ ಕಾಡೆತ್ತು/ವನವೃಷಭಗಳಿಗೆ ಆವಾಸ ಸ್ಥಾನವಾಗಿರುತ್ತದೆ.ಹಾಳಾಗಿರದ ಪ್ರಾಕೃತಿಕ ಪರಿಸರದಲ್ಲಿ ವಿಲಾಸವನ್ನು ಆಸ್ವಾದಿಸುವುದನ್ನು ನಿರೀಕ್ಷಿಸುತ್ತಿರುವಂತಹ ವಿಚಾರಶೀಲ ವನ್ಯಜೀವಿಗಳ ಬಗ್ಗೆ ಆಸಕ್ತಿಯನ್ನು ಹೊಂದಿರುವಂತಹ ಅಥವಾ ಆರಾಮದಾಯಕವಾಗಿ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರಿಗೆ ಕಿಂಗ್ಸ್ ಸಾಂಚುಯರಿ ನಿರಾಶೆಯನ್ನುಂಟು ಮಾಡುವುದಿಲ್ಲ.
40 ಎಕರೆಗಳಷ್ಟು ಮಾವಿನ ತೋಪು ಹಾಗೂ ಹಚ್ಚಹಸಿರು ಹುಲ್ಲು ಹಾಸು ಹಾಗೂ ವಿವಿಧ ಇತರೆ ಭಾರತೀಯ ಮತ್ತು ವಿದೇಶಿ ಫಲ ಕೊಡುವ ಗಿಡಗಳು ಮತ್ತು ಮರಗಳ ನಡುವೆ ನಿರ್ಮಿಸಲಾಗಿರುವಂತಹ ಕಿಂಗ್ಸ್ ಸಾಂಚುಯರಿಯು ತೈಲ್ಯಾಂಡ್ ಹಾಗೂ ಇಂಡೋನೇಷಿಯಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿರುವಂತಹ ಕೈಯಿಂದ ತಯಾರಿಸಲಾಗಿರುವ ಪೀಠೋಪಕರಣಗಳು, ಒಂದು ಈಜು ಕೊಳ, ಸಭೆಸಮಾರಂಭದ ಭವನ ಹಾಗೂ ಪ್ರಕೃತಿಶಾಸ್ತ್ರ ತಜ್ಞರ ಜೊತೆಯಲ್ಲಿ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಅರಣ್ಯ ಸಫಾರಿಗಳನ್ನು ಒಳಗೊಂಡಂತೆ 24 ಗಂಟೆಗಳ ಹವಾನಿಯಂತ್ರಿತ ವಿಲಾಸಿ ಸೂಟುಗಳು ಹಾಗೂ ಕಾಟೇಜುಗಳನ್ನು ಹೊಂದಿರುತ್ತದೆ.ಕಿಂಗ್ಸ್ ಸಾಂಚುಯರಿಯು ಕುಟುಂಬದೊಂದಿಗೆ ರಜೆಯನ್ನು ಆನಂದಿಸಲು ಹಾಗೂ ಅಲ್ಲದೆಯೇ ಸಾಂಸ್ಥಿಕ ಸಂಸ್ಥೆಗಳ ಸಭೆಸಮಾರಂಭಗಳಿಗೆ ಒಂದು ಸೂಕ್ತ ರೆಸಾರ್ಟ್ ಆಗಿರುತ್ತದೆ.
ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಮಳೆಗಾಲ ಕಳೆದ ತಕ್ಷಣ ಅಂದರೆ ಆಗಸ್ಟ್ ಮತ್ತು ಫೆಬ್ರವರಿ ನಡುವೆ, ಆ ಸಮಯದಲ್ಲಿ ನದಿಗಳು ನೀರು ತುಂಬಿಕೊಂಡು ಹರಿಯುತ್ತಿರುತ್ತವೆ ಹಾಗೂ ಅರಣ್ಯದ ಎಲೆಗಳು ಒತ್ತಾಗಿ ಹಾಗೂ ಹಚ್ಚಹಸಿರಾಗಿರುತ್ತವೆ. ಇದು ಪಕ್ಷಿಗಳ ವೀಕ್ಷಣೆಗೂ ಅತ್ಯುತ್ತಮ ಕಾಲವಾಗಿರುತ್ತದೆ – ರಿವರ್ ಟರ್ನ್ ಗಳು, ಮೀನು ಹಿಡಿಯುವ ಹದ್ದುಗಳು, ಮರ ಕುಟ್ಟಿಗಗಳು, ಕಿಂಗ್ ಫಿಷರ್ ಗಳು ಹಾಗೂ ಇತರೆ ಪಕ್ಷಿಗಳು ಇಲ್ಲಿ ಹಿಂಡುಹಿಂಡಾಗಿ ಬರುತ್ತವೆ. ಇತರೆ ತಿಂಗಳುಗಳಲ್ಲಿ, ನೀರು ಇಂಗುತ್ತದೆ ಹಾಗೂ ಮರಳು ಸಂಗ್ರಹಣೆಯನ್ನು ತೋರಿಸುತ್ತದೆ, ಅದು ಸಂಜೆಯನ್ನು ನಿಷ್ಕ್ರಿಯವಾಗಿರಿಸಲು ಅತ್ಯುತ್ತಮವಾಗಿರುತ್ತದೆ. ಬೇಸಿಗೆ ತಿಂಗಳುಗಳು (ಮಾರ್ಚ್ – ಜೂನ್) ಅದರಲ್ಲೂ ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ಶಾಖದಿಂದ ಕೂಡಿರುತ್ತವೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು.
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಆಯ್ಕೆ ಮಾಡಿಕೊಳ್ಳಲಾದ ವಸತಿ ಕೊಠಡಿಯ ಸ್ಥಳ, ಸ್ವಾಗತ ಪಾನೀಯ (ಮದ್ಯಪಾನೇತರ), ಮಧ್ಯಾಹ್ನದ ಊಟ, ಸ್ನ್ಯಕ್ ನೊಂದಿಗೆ ಟೀ, ರಾತ್ರಿ ಊಟ ಮತ್ತು ಬೆಳಿಗ್ಗೆ ಉಪಹಾರ, (ಎಲ್ಲಾ ಬಫೆ, ಸಸ್ಯಾಹಾರಿ ಮತ್ತು ಮಾಂಸಾಹರಿ), ಈಜು ಕೊಳದ ಬಳಕೆ ( ವಸ್ತ್ರ ಸಂಹಿತೆಯು ಕಡ್ಡಾಯವಾಗಿರುತ್ತದೆ), ಒಳಾಂಗಣ ಮತ್ತು ಹೊರಾಂಗಣ ಆಟಗಳು, ಮಾರ್ಗದರ್ಶನದೊಂದಿಗೆ ಪ್ರಕೃತಿಯಲ್ಲಿ ನಡಿಗೆ (ಬೆಳಿಗ್ಗೆ ಅಥವಾ ಸಂಜೆ), ಪಕ್ಷಿ ವೀಕ್ಷಣೆ, ನಿಯಂತ್ರಿತ ಬೆಂಕಿ (ಬಾನ್ ಫೈರ್) ಲಭ್ಯತೆಯ ಷರತ್ತಿಗೆ ಒಳಪಟ್ಟಂತೆ ಬೆಳಿಗ್ಗೆ ಅಥವಾ ಸಂಜೆ ಒಂದುಸಫಾರಿ (ಜೀಪು/ಬಸ್ಸು) , ಲಭ್ಯವಿದ್ದಲ್ಲಿ ಹೆಚ್ಚುವರಿ ಸಫಾರಿ, ರೂ.1,900.00 ಹೆಚ್ಚುವರಿಯಾಗಿ ಪಾವತಿಸಬೇಕು (ತಂಗಿರುವ ಅತಿಥಿಗೆ ತಗ್ಗಿಸಲ್ಪಟ್ಟ ದರ) ಎಲ್ಲಾ ಅನ್ವಯಗೊಳ್ಳುವ ತೆರಿಗೆಗಳನ್ನು ಒಳಗೊಂಡಿರುತ್ತದೆ. ಸಫಾರಿ ಕಾರ್ಯಾಚರಣೆಗಳು ವಾತಾವರಣದ ಸ್ಥಿತಿಯನ್ನು ಅವಲಂಭಿಸಿರುತ್ತವೆ. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು.
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಆಯ್ಕೆ ಮಾಡಿಕೊಳ್ಳಲಾದ ವಸತಿ ಕೊಠಡಿಯ ಸ್ಥಳ, ಸ್ವಾಗತ ಪಾನೀಯ (ಮದ್ಯಪಾನೇತರ), ಮಧ್ಯಾಹ್ನದ ಊಟ, ಸ್ನ್ಯಕ್ ನೊಂದಿಗೆ ಟೀ, ರಾತ್ರಿ ಊಟ ಮತ್ತು ಬೆಳಿಗ್ಗೆ ಉಪಹಾರ, (ಎಲ್ಲಾ ಬಫೆ, ಸಸ್ಯಾಹಾರಿ ಮತ್ತು ಮಾಂಸಾಹರಿ), ಈಜು ಕೊಳದ ಬಳಕೆ ( ವಸ್ತ್ರ ಸಂಹಿತೆಯು ಕಡ್ಡಾಯವಾಗಿರುತ್ತದೆ), ಒಳಾಂಗಣ ಮತ್ತು ಹೊರಾಂಗಣ ಆಟಗಳು, ಮಾರ್ಗದರ್ಶನದೊಂದಿಗೆ ಪ್ರಕೃತಿಯಲ್ಲಿ ನಡಿಗೆ (ಬೆಳಿಗ್ಗೆ ಅಥವಾ ಸಂಜೆ), ಪಕ್ಷಿ ವೀಕ್ಷಣೆ, ನಿಯಂತ್ರಿತ ಬೆಂಕಿ (ಬಾನ್ ಫೈರ್) ಲಭ್ಯತೆಯ ಷರತ್ತಿಗೆ ಒಳಪಟ್ಟಂತೆ ಬೆಳಿಗ್ಗೆ ಅಥವಾ ಸಂಜೆ ಎರಡು ಸಫಾರಿ (ಜೀಪು/ಬಸ್ಸು) , ಲಭ್ಯವಿದ್ದಲ್ಲಿ ಹೆಚ್ಚುವರಿ ಸಫಾರಿ, ರೂ.1,900.00 ಹೆಚ್ಚುವರಿಯಾಗಿ ಪಾವತಿಸಬೇಕು (ತಂಗಿರುವ ಅತಿಥಿಗೆ ತಗ್ಗಿಸಲ್ಪಟ್ಟ ದರ) ಎಲ್ಲಾ ಅನ್ವಯಗೊಳ್ಳುವ ತೆರಿಗೆಗಳನ್ನು ಒಳಗೊಂಡಿರುತ್ತದೆ. ಕಾರ್ಯಾಚರಣೆಗಳು ವಾತಾವರಣದ ಸ್ಥಿತಿಯನ್ನು ಅವಲಂಭಿಸಿರುತ್ತವೆ. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ
ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಹೋಗಲು ಸಿದ್ಧಗೊಳ್ಳಿರಿ
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಒಳಗಡೆಗೆ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ವನ್ಯಜೀವಿ ಸಫಾರಿಗೆ ಕರೆದುಕೊಂಡು ಹೋಗುವರು.
ಗೋಲ್ ಘರ್ ನಲ್ಲಿ ಲಘು ಉಪಹಾರದೊಂದಿಗೆ ಟೀ/ಕಾಫಿ
ಕ್ಯಾಂಪ್‌ಫೈರ್ನೊಂದಿಗೆ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿಸು:ಖವನ್ನು ಅನುಭವಿಸಿರಿ.
ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವುದಕ್ಕಾಗಿ ಕರೆ
ಚಹಾ ಮತ್ತು ಕಾಫಿ ಗೋಲ್ ಘರ್ ನಲ್ಲಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವಾಹನದಲ್ಲಿ ವನ್ಯಜೀವಿಗಳ ಸಫಾರಿಗಾಗಿ ಹೋಗುವುದು (ಒಂದು ಸಫಾರಿ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ, ಹೆಚ್ಚುವರಿ ಸಫಾರಿ ರೂ.2,242.00).
ನಿಮ್ಮ ಬೆಳಗ್ಗಿನ ಉಪಾಹಾರವನ್ನು ಆನಂದಿಸಿ ಗೋಲ್ ಘರ್ ನಲ್ಲಿ
ಸಿಹಿ ನೆನಪುಗಳೊಂದಿಗೆ ಪ್ರವಾಸ ಮುಕ್ತಾಯಗೊಳಿಸಿ– ಲಾಡ್ಜಿನಿಂದ ಹೊರಡುವುದು.
(English)
ಕ್ಯಾಂಪು ಬೆಂಗಳೂರಿನಿಂದ ಸುಮಾರು 196 ಕಿಲೋಮೀಟರುಗಳ ದೂರದಲ್ಲಿರುವುದು
ಮೈಸೂರು ಜಂಕ್ಷನ್ನು ಕ್ಯಾಂಪಿಗೆ ಅತೀ ಸಮೀಪದ ರೈಲ್ವೇ ಸ್ಟೇಷನ್ ಆಗಿರುತ್ತದೆ, ಇಲ್ಲಿಂದ ಬೆಂಗಳೂರಿಗೆ ಸಂಪರ್ಕಿಸುವ ಟ್ರೈನುಗಳು ಇರುತ್ತವೆ.
ಬೆಂಗಳೂರು ಮತ್ತು ಮುಂಬೈಗೆ ಸಂಪರ್ಕಿಸುವ ವಿಮಾನಗಳೊಂದಿಗೆ ಮೈಸೂರು ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿರುತ್ತದೆ.
(English) From Bengaluru to JLR Kings Sanctuary – https://goo.gl/maps/NiyfkjAcY34t3hXq8