Banner Image

ಓಂ ಬೀಚ್ ರೆಸಾರ್ಟ್, ಗೋಕರ್ಣ

ಬೆಲೆ ಪ್ರಾರಂಭವಾಗುತ್ತದೆ
₹ 1,250
ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ

ಅವಲೋಕನ

ದಕ್ಷಿಣ ಭಾರತದ “ಕಾಶಿ” ಎನಿಸಿರುವ ಗೋಕರ್ಣವು ಅಘನಾಶಿನಿ ಮತ್ತು ಗಂಗವಳ್ಳಿ ನದಿಗಳ ಸಂಗಮದ ಸಮೀಪ ಹಾಗೂ ಸಹ್ಯಾದ್ರಿಯ ಹಾಗೂ ಅರಬೀ ಸಮುದ್ರದ ನಡುವೆ ಇರುವುದು. ಅದರ ಕಾಲಾತೀತ ದೇವಸ್ಥಾನಗಳು ಹಾಗೂ ಮನಮೋಹಕ ಕಡಲತೀರಗಳು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ತಂಡಗಳನ್ನು ಆಕರ್ಷಿಸುತ್ತವೆ. ಹಿಂದುಗಳ ಆಧ್ಯಾತ್ಮಿಕ ಗುರುತಾಗಿರುವಂತಹ ಓಂ ಆಕಾರದಲ್ಲಿರುವಂತಹ ಗೋಕರ್ಣದ ಕಡಲತೀರಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿರುತ್ತದೆ ಹಾಗೂ ಹಾಗೂ ಅದರ ಹೆಸರನ್ನು ಓಂ ಕಡಲತೀರಕ್ಕೆ ನೀಡಿರುತ್ತದೆ ಹಾಗೂ ಬೆಟ್ಟಗುಡ್ಡಗಳ ಇಳಿಜಾರುಗಳಲ್ಲಿ ಹರಡಿದ್ದು ಹಚ್ಚಹಸುರಿನ ಕಣಿವೆಯ ಕಡೆಗೆ ದೃಷ್ಟಿ ಹರಿಸಿರುತ್ತದೆ ಗೋಕರ್ಣದ ದೇವಸ್ಥಾನಗಳು ಅನಾದಿ ಕಾಲದಿಂದಲೂ ಹೆಸರುವಾಸಿಯಾಗಿದ್ದು ಅದರ ಕಡಲತೀರಗಳು ಜೀವನದ ಜೊತೆ ಸುಖಸಂತೋಷದ ಮಿಡಿತವನ್ನು ಮಿಡಿಯುತ್ತವೆ.  ಅತ್ಯಂತ ಪ್ರಸಿದ್ಧವಾಗಿರುವಂತಹ ಓಂ ಕಡಲತೀರ ಸ್ಪಲ್ಪ ಅಲ್ಪ ಪ್ರಮಾಣದಲ್ಲಿ ತಿಳಿದಿರುವಂತಹ ಕುಡ್ಲೆ ಕಡಲತೀರ, ಶಾಂತತೆಯಿಂದ ಇರುವಂತಹ ಅರ್ಧ ಚಂದ್ರ ಕಡಲತೀರ ಹಾಗೂ ಪ್ರಿಸ್ಟೈನ್ ಪ್ಯಾರಡೈಸ್ ಕಡಲತೀರ, ಈ ನಾಲ್ಕು   ಮರಳಿನ ನೈಸರ್ಗಿಕ ದೃಶ್ಯಗಳು ಬೆಟ್ಟಗುಡ್ಡಗಳು ಹಾಗೂ ಸಮುದ್ರವನ್ನು ಅಪ್ಪಿಕೊಂಡಿರುತ್ತವೆ. ಶನಿಕಟ್ಟೆ ಮತ್ತು ತದಡಿ ಗ್ರಾಮಗಳು ಗೋಕರ್ಣಕ್ಕೆ ಅತೀ ಸಮೀಪದಲ್ಲಿವೆ.  ಮೂರು ಶತಮಾನಗಳಿಗೂ ಮುಂಚಿನಿಂದ ಉಪ್ಪು ತಯಾರಿಕೆಗೆ ಹೆಸರುವಾಸಿಯಾಗಿರುವ ಶನಿಕಟ್ಟೆ ಗ್ರಾಮವು ಕರ್ನಾಟಕದಲ್ಲಿ ಅತೀ ಹಳೆಯದಾದಂತಹ ಉಪ್ಪು ತಯಾರಿಕಾ ಸ್ಥಳವಾಗಿರುತ್ತದೆ.  ತದಡಿಯು ಒಂದು ಮೀನುಗಾರಿಕೆ ಬಂದರನ್ನು ಹಾಗೂ ಇಂಡೋ-ಡ್ಯಾನಿಷ್ ಸಹಯೋಗದಲ್ಲಿ ಸ್ಥಾಪಿಸಲಾಗಿರುವಂತಹ ಮೀನು ಸಂಸ್ಕರಣಾ ಸ್ಥಾವರವನ್ನು ಹೊಂದಿದೆ.ಏರುಪೇರು ಹಳ್ಳತಿಟ್ಟುಗಳ ಟ್ರೆಕಿಂಗ್ ಮಾರ್ಗಗಳು ಹಾಗೂ ಅತ್ಯುನ್ನತ ಮಟ್ಟದ ಹೊರಾಂಗಣಗಳ ಜೊತೆಯಲ್ಲಿ ಗೋಕರ್ಣದ ಸುತ್ತಮುತ್ತಲೂ ಸಾಹಸಪ್ರಿಯರು ಆವಿಷ್ಕರಣೆಯ ಮಾರ್ಗಗಳಲ್ಲಿ ಸಾಗಬಹುದು.

ಅನುಭವ

ಗೋಕರ್ಣವು ಸಮುದ್ರ ತೀರದ ಒಂದು ಸ್ಥಳ ಹಾಗೂ ಬೆಟ್ಟಗುಡ್ಡಗಳಲ್ಲಿನ ಒಂದು ದ್ವಾರವನ್ನು ಒಂದುಗೂಡಿಸುತ್ತದೆ. ಪಶ್ಚಿಮ ಘಟ್ಟಗಳು ಮತ್ತು ಅರಬೀ ಸಮುದ್ರದ ನಡುವೆ ಇರುವಂತಹ ಗೋಕರ್ಣವು ಸೂರ್ಯ, ಮರಳು ಮತ್ತು ಸಮುದ್ರದ ಸಮ್ಮೋಹಕಗೊಳಿಸುವಂತಹ ಸ್ಥಳವಾಗಿದೆ. ಮನಮೋಹಕ ಬೀಚುಗಳು ವೀಕ್ಷಿಸುವ ಸಲುವಾಗಿ ಅತ್ಯಂತ ಬೇಡಿಕೆಯಲ್ಲಿರುವ ಪ್ರವಾಸಿ ತಾಣವಾಗಿದೆ. ಪ್ರಸಿದ್ಧವಾಗಿರುವಂತಹ ಓಂ ಕಡಲತೀರ ಸ್ಪಲ್ಪ ಅಲ್ಪ ಪ್ರಮಾಣದಲ್ಲಿ ತಿಳಿದಿರುವಂತಹ ಕುಡ್ಲೆ ಕಡಲತೀರ, ಶಾಂತತೆಯಿಂದ ಇರುವಂತಹ ಅರ್ಧ ಚಂದ್ರ ಕಡಲತೀರ ಹಾಗೂ ಪ್ರಿಸ್ಟೈನ್ ಪ್ಯಾರಡೈಸ್ ಕಡಲತೀರ,  ಈ ನಾಲ್ಕು   ಮರಳಿನ ನೈಸರ್ಗಿಕ ದೃಶ್ಯಗಳು ಬೆಟ್ಟಗುಡ್ಡಗಳು ಹಾಗೂ ಸಮುದ್ರವನ್ನು ಅಪ್ಪಿಕೊಂಡಿರುತ್ತವೆ. ಮರಳಿನ ನೈಸರ್ಗಿಕ ಸುಂದರತೆಯ ಸ್ಥಳಗಳುದ್ದಕ್ಕೂ ನೀವು ನಿಧಾನವಾಗಿ ನಡೆಯಬಹುದು ಅಥವಾ ನಿರ್ಮಲ ಪರಿಶುದ್ಧ ನೀರಿನಲ್ಲಿ ದುಮುಕಿರಿ, ಕಲ್ಲುಬಂಡೆಗಳ ಬೆಟ್ಟಗುಡ್ಡಗಳಲ್ಲಿ ಟ್ರೆಕಿಂಗ್ ಮಾಡಿರಿ ಅಥವಾ ಆರಾಮವಾಗಿ ಒರಗಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಆನಂದಿಸಿರಿ.

ಕೇವಲ ಕಡಲತೀರಗಳಲ್ಲ, ಗೋಕರ್ಣವು ಅನಾದಿಕಾಲದ ದೇವಸ್ಥಾನಗಳಿಗೆ ಹೆಸರುವಾಸಿಯಾಗಿರುವುದು. “ದಕ್ಷಿಣ ಭಾರತದ ಕಾಶಿ” ಎಂಬುದಾಗಿ ಹೆಸರುವಾಸಿಯಾಗಿರುವ ಗೋಕರ್ಣವು ಪೌರಾಣಿಕ ಕತೆಗಳೊಂದಿಗೆ ಸಮೃದ್ಧಿಯಾಗಿದೆ. ಮಹಾಬಲೇಶ್ವರ ದೇವಸ್ಥಾನ ಮತ್ತು ಮಹಾ ಗಣಪತಿ ದೇವಸ್ಥಾನಗಳು ಗೋಕರ್ಣದ ಅನೇಕ ಪವಿತ್ರ ದೇವಸ್ಥನಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿರುತ್ತವೆ. ಬಹಳಷ್ಟು ದೇವಸ್ಥಾನಗಳು ಭಗವಂತ ಶಿವನಿಗೆ ಅರ್ಪಿತವಾಗಿರುತ್ತವೆ ಮತ್ತು ಆದ್ದರಿಂದ ಶಿವರಾತ್ರಿ ಹಬ್ಬವನ್ನು ಬಹಳ ಉತ್ಸಾಹದಿಂದ ಹಾಗೂ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.

ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಬ್ಬಗಳ ಒಂದು ಭಾಗವಾಗಿ ಒಂಬತ್ತು ದಿನಗಳವರೆಗೆ ನಡೆಸಲಾಗುತ್ತದೆ

ತದಡಿಯು ಒಂದು ಮೀನುಗಾರಿಕೆ ಬಂದರನ್ನು ಹಾಗೂ ಇಂಡೋ-ಡ್ಯಾನಿಷ್ ಸಹಯೋಗದಲ್ಲಿ ಸ್ಥಾಪಿಸಲಾಗಿರುವಂತಹ ಮೀನು ಸಂಸ್ಕರಣಾ ಸ್ಥಾವರವನ್ನು ಹೊಂದಿದೆ. ತದಡಿಯಲ್ಲಿ ಕೆಲಸ ಮಾಡುತ್ತಿರುವ ಡ್ಯಾನಿಷ್ ತಂಡವು ಕಣಿವೆಯನ್ನು ದೃಷ್ಟಿಸುತ್ತಿರುವ ಇಳಿಜಾರುಗಳಲ್ಲಿ ಕೊಂಕಣ ಶೈಲಿಯಲ್ಲಿ ನಿರ್ಮಿಸಲಾಗಿರುವಂತಹ ಕಾಟೇಜುಗಳಲ್ಲಿ ವಾಸಿಸುತ್ತಿದ್ದರು. ಈ ಗ್ರಾಮೀಣ ಕಾಟೇಜುಗಳನ್ನು ಇದೀಗ ಓಂ ಬೀಚ್ ರೆಸಾರ್ಟ್ ಆಗಿ ಪರಿವರ್ತಿಸಲಾಗಿರುವುದು, ಇದು ಆಕಾಶದೆತ್ತರದವರೆಗೂ ಇರುವಂತಹ ಪ್ರಕೃತಿ ಸೌಂದರ್ಯಗಳನ್ನು ವೀಕ್ಶಿಸುತ್ತಿರುವುದು.ಪುರಾತನ ಮತ್ತು ಆಧುನಿಕತೆಯ ಒಂದು ವೈಶಿಷ್ಟಪೂರ್ಣ ಸೇರ್ಪಡೆಯೊಂದಿಗೆ ಗೋಕರ್ಣವು ಒಂದು ವಿಭಿನ್ನ ರೀತಿಯ ಸ್ಥಳವಾಗಿದೆ.

ಕಾಲಾ

ಗೋಕರ್ಣಕ್ಕೆ ಭೇಟಿ ನೀಡಲು ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿಯು ಅತ್ಯುತ್ತಮವಾಗಿರುತ್ತದೆ. ಬೇಸಿಗೆ ಕಾಲದ ಏಪ್ರಿ ಮತ್ತು ಮೇ ತಿಂಗಳುಗಳಲ್ಲಿ ಶಖೆಯಿರುತ್ತದೆ. ಕಡಲತೀರದ ಗೋಕರ್ಣ ಪಟ್ಟಣದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ವಿಪರೀತವಾದಂತಹ  ಮಳೆಯಿರುತ್ತದೆ.

ಸಂಪರ್ಕ ಫಾರ್ಮ್

  ರೆಸಾರ್ಟ್ ಸಂಪರ್ಕ ಮಾಹಿತಿ

  ಬಂಗಲ್ ಗುಡ್ಡಾ, ಓಂ ಬೀಚ್ ರಸ್ತೆ ಗೋಕರ್ಣ - 581326
  ಕರ್ನಾಟಕ, ಭಾರತ
  ವ್ಯವಸ್ಥಾಪಕರು: ಸೋಮಣ್ಣ ಎ.ಗವಾಡಿ
  ಸಂಪರ್ಕ ಸಂಖ್ಯೆ: 9480885307
  ಲ್ಯಾಂಡ್-ಲೈನ್: 9480885304
  ಇಮೇಲ್ ಐಡಿ: info@junglelodges.com

  ಪ್ಯಾಕೇಜುಗಳು

  • Exterior
  • Interior
  • Interior
  • Bathroom
  • Exterior
  • Interior
  • Interior
  • Bathroom

  ಬೇಸಿಕ್ ಪ್ಯಾಕೇಜ್

  ಬೆಲೆ ಪ್ರಾರಂಭವಾಗುತ್ತದೆ
  ₹ 1,250 ₹ 1,250

  ಕೇವಲ ಉಳಿದುಕೊಳ್ಳುವಿಕೆ ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ ಮತ್ತು ಹೆಚ್ಚುವರಿ ವ್ಯಕ್ತಿಗೆ ರೂ.500/-. ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಚಟುವಟಿಕೆಗಳು, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಜಿಎಸ್ಟಿ 18% ಹೆಚ್ಚುವರಿ.

  ವಸತಿ ಪ್ರಕಾರ: ಕೊಠಡಿ (ರೂಂ)

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಆಸನ ಪ್ರದೇಶಗಳಲ್ಲಿ
  ಟಿವಿ
  • Exterior
  • Interior
  • Interior
  • Bathroom
  • Exterior
  • Interior
  • Interior
  • Bathroom

  ಗೋಕರ್ಣ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  ₹ 3,139 ₹ 2,643

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು).

  ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ, ಬೆಳಗ್ಗಿನ ಉಪಹಾರ, ಪ್ರಕೃತಿಯಲ್ಲಿ ನಡಿಗೆ, ದೇವಸ್ಥನಕ್ಕೆ ಭೇಟಿ (ಜಲ ಸಾಹಸ ಕ್ರೀಡೆ ಚಟುವಟಿಕೆಗಳು ಹೆಚ್ಚುವರಿ ಮೊತ್ತದ ಪಾವತಿಯ ಷರತ್ತಿಗೆ ಒಳಪಟ್ಟು) 18% ಜಿ ಎಸ್ ಟಿ.

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಕೊಠಡಿ (ರೂಂ)

  ಸೌಲಭ್ಯಗಳು:

  ವೈಫೈ ಸಾಮಾನ್ಯ ಪ್ರದೇಶ
  ಹವಾ ನಿಯಂತ್ರಣ
  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಲಿವಿಂಗ್ ರೂಮ್
  ಆಸನ ಪ್ರದೇಶಗಳಲ್ಲಿ
  ಕಾಫಿ ತಯಾರಕ ಯಂತ್ರ
  ಟಿವಿ

  ವಿವರ

  ದಿನ 1

   12:30 pm -

   ಮಧ್ಯಾಹ್ನ 12.30 ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.

    

   1:30 pm - 2:30 pm

   ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ ಹಾಗೂ ಅಲ್ಲದೆಯೇ ಈಜುಕೊಳದಲ್ಲಿ ತಂಪು ಮಾಡಿಕೊಳ್ಳಿರಿ/ ಆಯುರ್ವೇದ ಮಸಾಜ್ ಅನ್ನು ಆನಂದಿಸಿರಿ (ಬೆಳಿಗ್ಗೆ 9.00ರಿಂದ ಸಂಜೆ 5.00)

   3:00 pm - 3:30 pm

   ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ  ಕಡಲತೀರಕ್ಕೆ ಹೋಗಲು ಸಿದ್ಧಗೊಳ್ಳಿರಿ

   3:30 pm - 6:15 pm

   ನಿಮ್ಮನ್ನು ಕುಡ್ಲೆ/ಓಂ ಕಡಲತೀರದಲ್ಲಿ ಬಿಡಲು ಸ್ವಾಗತ ಸ್ಥಳದ ಬಳಿ ಜೀಪು ಸಿದ್ಧವಾಗಿರುತ್ತದೆ ಹಾಗೂ ಅದೇ ಜೀಪು ನಿಮ್ಮನ್ನು ಕಡಲತೀರದಿಂದ ರೆಸಾರ್ಟಿಗೆ ಪುನ: ಕರೆದುಕೊಂಡು ಬರುತ್ತದೆ.

   6:30 pm - 7:00 pm

   ಗೋಲ್ ಘರ್ ನಲ್ಲಿ ಲಘು ಉಪಹಾರದ ಜೊತೆಗೆ ಟಿ/ಕಾಫಿಯನ್ನು ನೀಡಲಾಗುವುದು

   8:30 pm - 10:00 pm

   ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ  ಕ್ಯಾಂಪು ಫೈರ್ ;ಬೆಚ್ಚನೆಯ ಅನುಭವವನ್ನು ಹೊಂದಿರಿ.

  ದಿನ 2

   7:00 am - 9:00 am

   ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ

   9:30 am - 10:00 am

   ಬೆಳಗ್ಗಿನ ಉಪಹಾರ

   11:00 am -

   ಪ್ರವಾಸ ಮುಕ್ತಾಯಗೊಳ್ಳುವುದು – ಲಾಡ್ಜ್ ನಿಂದ ಹೊರಡುವುದು.

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
  • ಬ್ಯಾಂಕ್ ವಿವರಗಳು
   Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

  ಪ್ರಯಾಣ ಸಲಹೆಗಳು

  (English)

  • Dress for comfort. Do avoid bright colours and stick to muted shades of green, black, grey and brown. The more you meld with the background, the better.
  • Wear comfortable walking shoes.
  • Avoid smoking – anything can start a forest fire.
  • You’ll be spending a lot of time outdoors. Don’t forget your hat, sunscreen, sunglasses, torch, etc.
  • Avoid plastics. We’re really trying to cut down on plastics.
  • PETS ARE STRICTLY  NOT ALLOWED

  ಮಾರ್ಗ ನಕ್ಷೆ

  From Gokarna

  ರಸ್ತೆಯ ಮೂಲಕ

  ರೈಲಿನ ಮೂಲಕ

  ವಿಮಾನದ ಮೂಲಕ

  Bengaluru to Om Beach Resort https://goo.gl/maps/gX25Fesqoe62


  ಮಾಡಬೇಕಾದ ಕೆಲಸಗಳು

  Beach

  (English) Day Visit Full Day

  ಬೆಲೆ ಪ್ರಾರಂಭವಾಗುತ್ತದೆ
  ₹ 1895 ₹ 1895

  (English) Visit to Devbagh Irland through boat, Buffet breakfast, boat safari for Dolphin sighting, Beach activities, Buffet lunch, Evening Tea/Coffee.

  ಇನ್ನಷ್ಟು ಅನ್ವೇಷಿಸಿ

  ಸೂರ್ಯ, ಮರಳು ಹಾಗೂ ಆಧ್ಯಾತ್ಮಿಕತೆ

  ಸೂರ್ಯ, ಮರಳು ಹಾಗೂ ಆಧ್ಯಾತ್ಮಿಕತೆ

  ಬೆಂಗಳೂರಿನಿಂದ ಗೋಕರ್ಣಕ್ಕೆ ನನ್ನ ಪ್ರಯಾಣವು ನಿರೀಕ್ಷೆಗಿಂತ ದೀರ್ಘಾವಧಿಯದಾಗಿದ್ದಿತು. ವಿಸ್ತರಿಸಲ್ಪಟ್ಟಿದ್ದ ವಾರಾಂತ್ಯಕ್ಕೆ ಮೊದಲು ನಾನು ಹೊರಟೆ, ಆದ್ದರಿಂದ ಬೆಂಗಳೂರಿನಿಂದ ಪ್ರಾರಂಭಗೊಳ್ಳುವ ಪ್ರತಿಯೊಂದು ಹೆದ್ದಾರಿಯೂ ವಾಹನದಟ್ಟಣೆಯಿಂದ ಉಸಿರುಗಟ್ಟಿಸುವಂತಿದ್ದಿತು. ಮಲಗಿಕೊಂಡು ಹೋಗುವ ಅನುಕೂಲತೆಯಿದ್ದಂತಹ (ಸ್ಲಿಪರ್) ಬಸ್ಸು ನಿರ್ದಿಷ್ಟವಾಗಿ ಆರಾಮದಾಯಕವಾಗಿರಲಿಲ್ಲ, ಆದರೆ ಅದು ನನ್ನದೇ ಆದಂತಹ ಖಾಸಗಿ/ವೈಯಕ್ತಿಕ ಸ್ಥಳವನ್ನು ನೀಡಿತು. ಖಾಸಗಿ/ವೈಯಕ್ತಿಕ ಸ್ಥಳ – ಮುಂದಿನ ಕೆಲವು ದಿನಗಳಲ್ಲಿ ಆನಂದಿಸ ಬಯಸುವ ಹಾಗೂ ಅದನ್ನು ನಿರೀಕ್ಷಿಸುವ ಒಂದು ಸುಖಭೋಗ/ಸುಖವಿಲಾಸ.

  ರೆಸಾರ್ಟ್

  ಫೇಸ್ಬುಕ್

  ಟ್ವಿಟರ್

  ಕೃತಿಸ್ವಾಮ್ಯ © 2021 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

  Top