Banner Image

ಶರಾವತಿ ಸಾಹಸ ಶಿಬಿರ

ಬೆಲೆ ಪ್ರಾರಂಭವಾಗುತ್ತದೆ
4,012 (all inclusive stay packages).
ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ
ಬೆಲೆ ಪ್ರಾರಂಭವಾಗುತ್ತದೆ
4,012 (all inclusive stay packages).  ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ

ಅವಲೋಕನ

ಕರ್ನಾಟಕದ ವೈಭವ, ಭವ್ಯತೆಗಳ ಶಿರೋವೇಷ್ಟನದಲ್ಲಿ ಒಂದು ಅತ್ಯಮೂಲ್ಯ ಆಭರಣವಾಗಿರುವಂತಹ ಸಹ್ಯಾದ್ರಿ ಪರ್ವತ ಶ್ರೇಣಿಗಳು ವಿಫುಲವಾದಂತಹ ಪ್ರಾಕೃತಿಕ ಕೊಡುಗೆಗಳಿಂದ ಕೂಡಿರುತ್ತವೆ.   ಹಚ್ಚಹಸಿರಿನ ಕಣಿಗಳು, ಚಿಮ್ಮುತ್ತ ಹರಿಯುವ ನದಿಗಳು, ವೈಭವೇಪೇತ ಹುಲ್ಲುಗಾವಲುಗಳು ಹಾಗೂ ಒಂದು ಗಮನಾರ್ಹವಾದಂತಹ ಅರಣ್ಯ ವ್ಯಾಪಿತ ಪ್ರದೇಶಗಳು  ವಿರಳವಾದಂತಹ ಸಸ್ಯಸಂಪತ್ತು ಮತ್ತು ಪ್ರಾಣಿಕೋಟಿಗಳ ಒಂದು ನಿಧಿನಿಕ್ಷೇಪವಾಗಿರುತ್ತವೆ. ಸಹ್ಯಾದ್ರಿ ಪರ್ವತ ಶ್ರೇಣಿಗಳು ಅವುಗಳ ವಿಶಾಲವಾದಂತಹ ಪ್ರದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಹೊಸ ಜೀವನವು ಪ್ರಾರಂಭಗೊಂಡಾಗ, ಮಳೆಗಾಲದಲ್ಲಿ ರೋಮಾಂಚಕ ಹಾಗೂ ಅನುರಣನೀಯ ವೇಷಭೂಷಣಗಳನ್ನು ಪ್ರದರ್ಶಿಸುತ್ತವೆ, ಶರಾವತಿ ನದಿಯು ನಮ್ಮ ತಲೆಸುತ್ತು ಬರಿಸುವ ರೀತಿಯಲ್ಲಿ ದಿಗ್ಭ್ರಾಂತವಾದಂತಹ 830 ಅಡಿಗಳ ಎತ್ತರದಿಂದ ದುಮುಕುವಳು ಹಾಗೂ ಭಾರತದ ಅತೀ ಎತ್ತರದ ಜಲಪಾತಗಳ ಪೈಕಿ ಒಂದಾಗಿರುವ ಜೋಗ ಜಲಜಾತವನ್ನು ಸೃಷ್ಟಿಸುವಳು.ರಾಜ, ರಾಣಿ, ರಾಕೇಟ್ ಮತ್ತು ರೋರರ್ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿರುವ ನಾಲ್ಕು ಕವಲುಗಳಾಗಿ  ಕೆಳಕ್ಕೆ ದುಮುಕುವ ಜೋಗದ ಜಲಪಾತವನ್ನು ವೀಕ್ಷಿಸಲು ಮಳೆಗಾಲವು ಅತ್ಯುತ್ತಮವಾಗಿರುತ್ತದೆ.

ಜೋಗದ ಜಲಪಾತದಿಂದ ಕೇವಲ 6 ಕಿಲೋಮೀಟರುಗಳ ದೂರದಲ್ಲಿರುವ ಶರಾವತಿ ಆಡ್ವೆಂಚರ್ ಕ್ಯಾಂಪು ಅಮೂಲ್ಯವಾದ ಬೆಟ್ಟಗಳ ಧೀರೋದ್ದಾತತೆ ಹಾಗೂ ಸಾಹಸಕ್ರೀಡೆಗಳ  ಶಕ್ತಿಸಾಮರ್ಥ್ಯಗಳನ್ನು ತನ್ನ ಕಾರ್ಯಚಟುವಟಿಕೆಗಳಲ್ಲಿ ಸಮ್ಮಿಶ್ರಣಗೊಳಿಸುತ್ತದೆತಳಕಳಲೆ ಜಲಾಶಯದ ಅಂಚುಭಾಗವಾಗಿರುವ ಗುಡ್ಡಗಳ ಇಳಿಜಾರಿನಲ್ಲಿ ಅನುಕೂಲಕರ ಹಾಗೂ ಹಿತಕರವಾಗಿ ಇರುವಂತಹ ಈ ರೆಸಾರ್ಟು ಸೂರ್ಯನ ರಶ್ಮಿ ಹಾಗೂ  ಮಳೆಯ ಉತ್ತೇಜಕವಾದಂತಹ ಸಮ್ಮಿಶ್ರಣವಾಗಿರುತ್ತದೆ. ಈ ಆರೋಗ್ಯಕರ ಬೆಟ್ಟಗಳಿಗೆ ಪ್ರತಿಯೊಂದು ಕಾಲವೂ ಭೇಟಿ ನೀಡಲು ಒಂದು ಹೊಸ ಕಾರಣವನ್ನು ತರುತ್ತದೆ.

ಶರಾವತಿ ನೇಚರ್ ಕ್ಯಾಂಪು ಮಳೆಗಾಲದ ಅತ್ಯಂತ ಶುಭ್ರವಾದಂತಹ ವಿಸ್ಮಯಗಳನ್ನು ಅನುಭವಿಸುವ ಸಲುವಾಗಿ ಒಂದು ಸೂಕ್ತ ಸ್ಥಳವಾಗಿರುತ್ತದೆ.ಮಳೆ ಭರಿತ ಮೋಡಗಳು ಸರಿದು ಹೋದನಂತರ, ವಾತಾವರಣವು  ನಿಮ್ಮ ಹೊರಾಂಗಣ ಸುತ್ತುವಿಕೆಗೆ ಸೂಕ್ತವಾಗಿರುತ್ತದೆ. ಹಕ್ಕಿಗಳ ಚಿಲಿಪಿಲಿ ಮಾತುಗಳ ನಡುವೆ ಪ್ರಕೃತಿಯಲ್ಲಿ ನಡೆದಾಡುವುದರಿಂದ ನೀವು ಸುತ್ತಮುತ್ತಲಿನ ಗ್ರಾಮೀಣ  ಮೌನವನ್ನು ಆನಂದಿಸಬಹುದು.

ಚಿಟ್ಟೆಗಳು ಮೊಗ್ಗುಗಳಿಂದ ಹೂವುಗಳಿಗೆ ಹಾಗೂ ಎಲೆಯಿಂದ ಎಲೆಗೆ ಹಾರಾಡುತ್ತಿರುತ್ತವೆಯಾದ್ದರಿಂದ ನೀವು ಅವುಗಳನ್ನು ಹಿಡಿಯುವ ಸಲುವಾಗಿ ಓಡಾಡಬಹುದು. ಜಲಾಶಯದ  ಹೊಸದಾಗಿ ಬಂದಿರುವ ನೀಲಿ ನೀರಿನ ಉದ್ದಕ್ಕೂ ಸಾಗುವ ಮೂಲಕ ಕೊರಕ್ಲೆ ಸವಾರಿಗಳು, ಕಯಾಕಿಂಗ್ ಹಾಗೂ ಜಾಯ್ ಫಿಷಿಂಗ್ ಮುಂತಾದ ಜಲ ಸಾಹಸಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು ನೀರಿನ ಅಂಚಿನಲ್ಲಿ ಒಂದು ಕಾಫಿಯನ್ನು   ಹೀರುತ್ತಾ ಸೂರ್ಯನು  ತಿಳಿ ಕಿತ್ತಳೆ ಬಣ್ಣಗಳಿಂದ ಆಕಾಶದಲ್ಲಿ ಚಿತ್ತಾರವನ್ನು ಮೂಡಿಸಿರುವುದನ್ನು ಹಾಗೂ ಅದನ್ನು ರಕ್ತವರ್ಣದ ವಿಸ್ಮಯಕಾರಿ ರಚನೆಗೆ ಪರಿವರ್ತಿತಗೊಳ್ಳುವುದನ್ನು ನೀವು ವೀಕ್ಷಿಸಬಹುದು. ನೀವು ಹಿಮಭರಿತ ಮುಂಜಾನೆಯಲ್ಲಿ ನಿದ್ರೆಯಿಂದ ಎದ್ದೇಳಬಹುದು ಹಾಗೂ ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯಕ್ಕೆ ಚಲಿಸಬಹುದು.

ಅಭಯಾರಣ್ಯವು ಶರಾವತಿ ನದಿ ಪಾತ್ರದ ಒಂದು ಭಾಗದ ಮೂಲಕ ಹಾದು ಹೋಗುತ್ತದೆ ಹಾಗೂ ಸದಾ ಕಾಲವೂ ಹಚ್ಚಹಸಿರಾಗಿರುವ ತೇವದಿಂದ ಕೂಡಿದ  ಹಾಗೂ ಎಲೆಗಳು ಸ್ವಾಭಾವಿಕವಾಗಿ ಉದುರುವಂತಹ ಮರಗಳ ಕಾಡುಗಳನ್ನು ಹೊಂದಿರುತ್ತದೆ. ಶರಾವತಿ ಆಡ್ವೆಂಚರ್ ಕ್ಯಾಂಪಿನಲ್ಲಿ  ಪ್ರಕೃತಿಯ ತೊಡೆಯಲ್ಲಿ ಮಲಗಿರುತ್ತೀರಿ ಹಾಗೂ ಸಹಾದ್ರಿ ಬೆಟ್ಟಗಳ  ಅಲೌಕಿಕ ಸೌಂದರ್ಯವನ್ನು ಆನಂದಿಸುವಿರಿ.

ಅನುಭವ

ರೆಸಾರ್ಟು ಹಾಗೂ ಅದರ ಸುತ್ತಮುತ್ತಲ ದ್ವೀಪಗಳು ಒಂದು ವಿಸ್ತೃತ ವೈವಿದ್ಯತೆಗಳ  ಹಕ್ಕಿಪಕ್ಷಿ ವರ್ಗದ ಅತಿಥಿಗಳನ್ನು ಆಕರ್ಷಿಸುತ್ತವೆ. ಸಾಮಾನ್ಯವಾಗಿ ನೋಡಬಹುದಾದ ಹಕ್ಕಿಗಳೆಂದರೆ, ಕಿಂಗ್ ಫಿಷರ್ ಗಳು, ಭಾರತೀಯ ನವಿಲುಗಳು/ಮಯೂರ, ಹೂಪೋಸ್, ಹಾರ್ನ್ ಬಿಲ್ ಗಳು, ಕೊಳದ ಕ್ರೌಂಚ ಪಕ್ಷಿಗಳು, ಬೂದು ಬಣ್ಣದ ತಲೆಯನ್ನು ಹೊಂದಿರುವ ಬುಲ್ ಬುಲ್ ಗಳು ಹಾಗೂ ಕಾರ್ಮೊರ್ಯಾಂಟ್ ಗಳು.  ರೆಸಾರ್ಟಿನ ಸಮೀಪದಲ್ಲಿಯೇ ಅನೇಕ ರೀತಿಯ ಚಿಟ್ಟೆಗಳನ್ನು ಕಾಣಬಹುದು.ಕಪ್ಪು ಮೇಲ್ವೈ ಹೊಂದಿರುವ ಮೊಲಗಳು, ಸಾಮಾನ್ಯ ಮಂಗಗಳು ಹಾಗೂ ಮಲಬಾರಿನ ಬೃಹತ್ ಗಾತ್ರದ ಅಳಿಲುಗಳು ಮುಂತಾದ ನಾಲ್ಕು ಕಾಲಿನ ಮರಿಗಳನ್ನು ಹಾಕುವ (ಮಾಮ್ಮಲ್ ಗಳು) ಪ್ರಾಣಿಗಳನ್ನೂ ಸಹ ಕಾಣಬಹುದು.

ಕಾಲಾ

ನೈರುತ್ಯ ಮುಂಗಾರು ಮಳೆಯು ಜೂನ್ ತಿಂಗಳಿನಲ್ಲಿ ಪ್ರಾರಂಭಗೊಂಡು ನವಂಬರ್ ವರೆಗೂ ಇರುತ್ತದೆ. ಮಳೆಗಾಲದಲ್ಲಿ, ಪಶ್ಚಿಮ ಘಟ್ಟಗಳು ಮಳೆಯ ನೀರಿನಲ್ಲಿ ಒದ್ದೆಯಾಗಿರುತ್ತವೆ, ಇದರಿಂದಾಗಿ ಹೊಸ ಜೀವನ ಮತ್ತು ನಾವೀನ್ಯತೆಯ ಪುನರಾಗಮವಾಗುತ್ತದೆ. ಇದು ಜೋಗದ ಜಲಪಾತಗಳಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿರುತ್ತದೆ.  ಜಲ ಆಧಾರಿತ ಸಾಹಸಕ್ರೀಡೆಗಳಿಗೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೂಕ್ತವಾಗಿರುತ್ತದೆ. ಮಾರ್ಚ್ ನಿಂದ ಮೇ ವರೆಗೆ ಬೇಸಿಗೆ ಕಾಲ ಆಗಿರುತ್ತದೆ.

ಸಂಪರ್ಕ ಫಾರ್ಮ್

  ರೆಸಾರ್ಟ್ ಸಂಪರ್ಕ ಮಾಹಿತಿ

  ಕಾರ್ಗಲ್-ಜೋಗ್ ಫಾಲ್ಸ್ ಸಾಗರ್ ತಾಲ್ಲೂಕು ಶಿವಮೊಗಾ ಜಿಲ್ಲೆ - 577421 ಕರ್ನಾಟಕ, ಭಾರತ
  ವ್ಯವಸ್ಥಾಪಕರು: ಶ್ರೀ ಪಿ ಆರ್ ನಾಯಕ್
  ಸಂಪರ್ಕ ಸಂಖ್ಯೆ: 9449599784/
  9449599767
  ಲ್ಯಾಂಡ್-ಲೈನ್: 08186 240399
  ಇಮೇಲ್ ಐಡಿ: info@junglelodges.com

  ಪ್ಯಾಕೇಜುಗಳು

  • Exterior
  • Interior
  • Interior
  • Bathroom
  • Exterior
  • Interior
  • Interior
  • Bathroom

  ಕಾಸ್ಕೇಡ್ಸ್ ಪ್ಯಾಕೇಜು (ಎಸ್ ಸಿ ಟಿ)

  ಬೆಲೆ ಪ್ರಾರಂಭವಾಗುತ್ತದೆ
  5,900 5,015

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಒಳಗೊಂಡಂತೆ)

  %. ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ ಹಾಗೂ ಚಟುವಟಿಕೆಗಳನ್ನು  ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು, ಮತ್ತು ಜಿ ಎಸ್ ಟಿ 18% .

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ವಿಶೇಷ ಕಾಟೇಜು

  ಸೌಲಭ್ಯಗಳು:

  ಹವಾ ನಿಯಂತ್ರಣ
  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಲಿವಿಂಗ್ ರೂಮ್
  ಆಸನ ಪ್ರದೇಶಗಳಲ್ಲಿ
  ಬಾಲ್ಕನಿ
  ಕಾಫಿ ತಯಾರಕ ಯಂತ್ರ
  ಟಿವಿ
  • Exterior
  • Interior
  • Interior
  • Bathroom
  • Exterior
  • Interior
  • Interior
  • Bathroom

  ಕಾಸ್ಕೇಡ್ಸ್ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  4,720 4,012

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಒಳಗೊಂಡಂತೆ)

  ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ ಹಾಗೂ ಚಟುವಟಿಕೆಗಳನ್ನು ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು, ಮತ್ತು ಜಿ ಎಸ್ ಟಿ 18% .

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಕಾಟೇಜು

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಲಿವಿಂಗ್ ರೂಮ್
  ಆಸನ ಪ್ರದೇಶಗಳಲ್ಲಿ
  ಬಾಲ್ಕನಿ
  ಕಾಫಿ ತಯಾರಕ ಯಂತ್ರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ
  • ಶರಾವತಿ ಸಾಹಸ ಶಿಬಿರ

  ಹಗಲು ಹೊತ್ತಿನ ಭೇಟಿ

  ಬೆಲೆ ಪ್ರಾರಂಭವಾಗುತ್ತದೆ
  1,180

  ಮಾರ್ಗದರ್ಶಿ ಚಾರಣ(ಗೈಡೆಡ್ ಟ್ರೆಕ್ಕಿಂಗ್), ಪ್ರಕೃತಿ ನಡಿಗೆ, ದೋಣಿ ವಿಹಾರ, ಪಕ್ಷಿ ವೀಕ್ಷಣೆ, ಕೊರಾಕಲ್ ರೈಡ್, ಕಯಾಕಿಂಗ್

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಒಳಗೊಂಡಂತೆ.

   

   

  ಸೌಲಭ್ಯಗಳು:

  ವಿವರ

  ದಿನ 1

   1:00 pm -

   ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು

   12:30 pm - 1:30 pm

   ಊಟದ ಮನೆಯಲ್ಲಿ ಊಟ

   4:00 pm - 4:25 pm

   ಟೀ/ಕಾಫಿ ನೀಡಲಾಗುವುದು

   4:30 pm - 6:00 pm

   ಕೊರಕ್ಲೆ ಸವಾರಿ/ದೋಣಿ/ಕಯಾಕಿಂಗ್

   6:30 pm - 7:00 pm

   ಟೀ/ಕಾಫಿ ಜಲಾಶಯದ ಹತ್ತಿರ

   7:30 pm - 8:15 pm

   ಡಾಕ್ಯುಮೆಂಟರಿ ಚಲನಚಿತ್ರ ಪ್ರದರ್ಶನ

   8:30 pm - 10:00 pm

   ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖ-ಸಂತೋಷವನ್ನು ಅನುಭವಿಸಿರಿ.

  ದಿನ 2

   6:00 am - 6:15 am

   ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವುದಕ್ಕಾಗಿ ಕರೆ

   6:30 am - 8:00 am

   ಜೋಗದ ಜಲಪಾತಗಳಿಗೆ ಭೇಟಿ/ಪ್ರಕೃತಿಯಲ್ಲಿ ನಡಿಗೆ/ಹಕ್ಕಿಗಳ ವೀಕ್ಷಣೆ

   9:00 am - 10:00 am

   ಬೆಳಗ್ಗಿನ ಉಪಹಾರ.

   10:30 am -

   ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು.

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
  • ಬ್ಯಾಂಕ್ ವಿವರಗಳು
   Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

  ಪ್ರಯಾಣ ಸಲಹೆಗಳು

  (English)

  • Dress for comfort. Do avoid bright colours and stick to muted shades of green, black, grey and brown. The more you meld with the background, the better.
  • Wear comfortable walking shoes.
  • Avoid smoking – anything can start a forest fire.
  • You’ll be spending a lot of time outdoors. Don’t forget your hat, sunscreen, sunglasses, torch, etc.
  • Avoid plastics. We’re really trying to cut down on plastics.
  • PETS ARE STRICTLY  NOT ALLOWED

  ಮಾರ್ಗ ನಕ್ಷೆ

  From ಬೆಂಗಳೂರಿನಿಂದ

  ರಸ್ತೆಯ ಮೂಲಕ

  ರೆಸಾರ್ಟು ಬೆಂಗಳೂರಿನಿಂದ 409 ಕಿಲೋಮೀಟರುಗಳ ದೂರದಲ್ಲಿದೆ.

  ರೈಲಿನ ಮೂಲಕ

  ಅತೀಸಮೀಪದ ರೈಲು ನಿಲ್ದಾಣವು ತಾಳಗುಪ್ಪದಲ್ಲಿರುವುದು, ಅಲ್ಲಿಂದ ಬೆಂಗಳೂರಿಗೆ ಆಗಿಂದಾಗ್ಗೆ ಟ್ರೈನುಗಳ ಸಂಪರ್ಕವಿರುವುದು.

  ವಿಮಾನದ ಮೂಲಕ

  ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿರುತ್ತದೆ.

  Bengalureu toSharavathi Adventure Camphttps://goo.gl/maps/NUUBFRzbDU32


  ಮಾಡಬೇಕಾದ ಕೆಲಸಗಳು

  Beach

  (English) MOTOR BOAT RIDE

  ಬೆಲೆ ಪ್ರಾರಂಭವಾಗುತ್ತದೆ
  300

  (English) Tariffs are per person basis

  ಇನ್ನಷ್ಟು ಅನ್ವೇಷಿಸಿ

  ಕ್ಯಾಂಪಿನ ಸುತ್ತಮುತ್ತಲು ಒಂದು ರಾತ್ರಿ

  ಕ್ಯಾಂಪಿನ ಸುತ್ತಮುತ್ತಲು ಒಂದು ರಾತ್ರಿ

  ನಾನು ಪಶ್ಚಾತ್ತಾಪ ಪಟ್ಟುಕೊಳ್ಳಬೇಕು: ಪಶ್ಚಿಮ ಘಟ್ಟಗಳ ಮಳೆಅರಣ್ಯಗಳು, ಅವುಗಳ ಕಪ್ಪೆಗಳು, ಹಾವುಗಳು, ಕ್ರಿಮಿಕೀಟಗಳು ಹಾಗೂ ಜೇಡರಹುಳುಗಳನ್ನು ಒಳಗೊಂಡಂತೆ ಅಧ್ಬುತ ಸ್ಥಳವಂದಿಗ  ಪ್ರಾಣಿವರ್ಗಗಳೊಂದಿಗೆ ಯಾವಾಗಲೂ ನನ್ನ ಹೃದಯದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿರುವವು, ಅವುಗಳೆಲ್ಲವನ್ನೂ ಮೀರಿಸುವುದು – ಜೋಗದ ಜಲಪಾತಗಳು. ಭಾರತದ ಅತ್ಯಂತ ಎತ್ತರದಿಂದ ದುಮುಖುವ ಎರಡನೆಯ ಸ್ಥಾನದಲ್ಲಿರುವ ಜಲಪಾತವಾಗಿದ್ದು ಬಹಳಷ್ಟು ವರ್ಷಗಳವರೆಗೆ ನನಸಾಗದ ಕನಸಾಗಿದ್ದಿತು, ಒಂದು ರೀತಿಯಲ್ಲಿ ಅತ್ಯಂತ ಹತ್ತಿರದಲ್ಲಿರುವ ಆದಾಗ್ಯೂ ಅತ್ಯಂತ ದೂರದಲ್ಲಿರುವುದರ ಒಂದು ಪ್ರಕರಣವಾಗಿದ್ದಿತು.  ಆದ್ದರಿಂದ, ನನಗೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟಿನ ಶರಾವತಿ ಸಾಹಸಕ್ರೀಡೆಗಳ ಕ್ಯಾಂಪಿಗೆ ಹೋಗುವ ಒಂದು ಅವಕಾಶ ದೊರೆತಾಗ ನನ್ನ ಮೊದಲ ನಿಲುಗಡೆಯನ್ನು ಊಹಿಸುವುದು ಕಷ್ಟಸಾಧ್ಯವಾಗಿರುವುದಿಲ್ಲ.

  ಶರಾವತಿ – ಜೀವನದ ಉಡುಗೊರೆಗಳು ಸಣ್ಣ ಪ್ಯಾಕೇಜುಗಳಲ್ಲಿ ಬರುತ್ತವೆ

  ಶರಾವತಿ – ಜೀವನದ ಉಡುಗೊರೆಗಳು ಸಣ್ಣ ಪ್ಯಾಕೇಜುಗಳಲ್ಲಿ ಬರುತ್ತವೆ

  ಕಡೆಯದನ್ನು ಹೊರತುಪಡಿಸಿದಂತೆ, ಮೇಲಿನ ಯಾವುದೇ ಹೇಳಿಕೆಗಳು ಒಂದು ವನ್ಯಜೀವಿ ಸಾಹಸಕ್ರೀಡೆಗಳ ತಾಣಕ್ಕೆ ಒಂದು ಸೂಕ್ತ ಜಾಹಿರಾತು ಎಂಬುದಾಗಿ ಭಾವಿಸಲಾಗುವುದಿಲ್ಲ.  ಯಾವುದೇ ಆನೆಗಳಿರುವುದಿಲ್ಲ, ಯಾವುದೇ ಹುಲಿಗಳಿರುವುದಿಲ್ಲ, ಖಾತರಿಯಿಂದ ಕೂಡಿದ ಯಾವುದೇ ಚಿರತೆಗಳ ವೀಕ್ಷಣೆಯೂ ಕಂಡುಬರುವುದಿಲ್ಲಾ? ಹೀಗಿದ್ದಲ್ಲಿ ಹೋಗುವ ಬಗ್ಗೆ ಏಕೆ ಚಿಂತಿಸುವಿರಿ? ಮೋಹಕತೆಯುಳ್ಳ  ಬೃಹತ್-ಸಸ್ತನಿ ಪ್ರಾಣಿವರ್ಗದ ಸಂಖ್ಯೆಗಳಲ್ಲಿ ಇಳಿಮುಖಗೊಂಡಿರುವುದು ,(ಓರ್ವ ಪ್ರಕೃತಿಶಾಸ್ತ್ರಜ್ಞ ಸ್ನೇಹಿತರ ವ್ಯಂಗ್ಯೋಕ್ತಿಯ ಪ್ರಕಾರ) ವನ್ಯಜೀವಿಗಳನ್ನು  ಪಾರಿತೋಷಕವಾಗಿ ಅರಸಿಕೊಂಡು ಬರುವ ಪ್ರವಾಸಿಗರಿಗೆ ಪ್ರತಿರೋಧಕವಾಗಿ ಪರಿಣಮಿಸಿರುವುದು.

  (English) What Lies in Sharavathi in Summer?

  (English) For a long time, the only response I had for people asking me about what they could do or see in Sharavathi Adventure Camp near Shimoga, was to mention Jog Falls in a rather hesitant, small voice. I did not want to break their perception that I had visited the region; after all, being considered the resident ‘junglee’ in the office was a tough job, more so when people assumed that you had travelled to most destinations in Karnataka. Plus, with the designation of a researcher, the pressure was to know about a place even without visiting it. Trickier was when people asked me the dreaded question: “What happens in summer? Jog Falls must be running dry, no?” Most times, a vehement fit of coughing would prove helpful in deflecting the question.

  ರೆಸಾರ್ಟ್

  ಫೇಸ್ಬುಕ್

  ಟ್ವಿಟರ್

  ಕೃತಿಸ್ವಾಮ್ಯ © 2022 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

  Top