ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಭಗವತಿ ನೇಚರ್ ಕ್ಯಾಂಪು ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗಡೆ ಇರುವುದು. ಕ್ಯಾಂಪಿನ ಒಳಗಡೆಯೇ ಇರುವಂತಹ ಪಕ್ಷಿಗಳ ವೀಕ್ಷಣೆಗೆ ಅವಕಾಶಗಳು ಹಾಗೂ ಸರೀಸೃಪಗಳ ವೀಕ್ಷಣೆಯೊಂದಿಗೆ ಅನೇಕ ಟ್ರೆಕಿಂಗ್ ಗಳಿಗೆ ಒಂದು ಅದ್ಭುತ ಪ್ರಾರಂಭಿಕ ಸ್ಥಳವನ್ನು ನೀಡುತ್ತದೆ.ಅದು ಕುದುರೇಮುಖದಿಂದ 11 ಕಿಲೋಮೀಟರುಗಳ ದೂರದಲ್ಲಿರುವುದು.
ಅದು ಬಂಗಾರದ ಹುಲ್ಲಿನ ಭೂಮಿಯ ಅಪರಿಮಿತ ಅಲಂಕೃತ ಸುಂದರ ಚಿತ್ರಣವಾಗಿರುತ್ತದೆ, ಅಲ್ಲಲ್ಲಿಯೇ ಹಚ್ಚ ಹಸಿರು ಅರಣ್ಯ ಭೂಮಿಗಳಿಂದ ಅಲಂಕೃತವಾಗಿದ್ದು, ಮೇಲುಗಡೆ ಆಕಾಶದ ಎತ್ತರದಲ್ಲಿ ಹಚ್ಚಹಸಿರು ಮಳೆ ಅರಣ್ಯಗಳನ್ನು ಹೊಂದಿದ್ದು ಆಕಾಶದಲ್ಲಿನ ದ್ವೀಪಗಳಂತೆ ಕಾಣಿಸುತ್ತದೆ. ಅದು ಪ್ರಮುಖ ನದಿಗಳ ಉಗಮ ಸ್ಥಾನವೂ ಆಗಿದೆ, ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳು ಇಲ್ಲಿ ಹುಟ್ಟುತ್ತವೆ. ಸುತ್ತಮುತ್ತಲೂ ಎಲ್ಲಾ ಕಡೆಗಳಲ್ಲೂ ಸಮನಾದ ಮೋಹಕ ಅರಣ್ಯಗಳು, ಕಾಫೀ, ಏಲಕ್ಕಿ ಹಾಗೂ ಅಡಕೆ ತೋಟಗಳಿಂದ ಸುತ್ತುವರಿದಿದ್ದು, ಉದ್ಯಾನವನವು ನೈಜವಾಗಿ ಪ್ರಕೃತಿಯನ್ನು ಅದರ ಅತ್ಯುತ್ತಮ ಸ್ಥಿತಿಯಲ್ಲಿ ನೋಡಬಯಸುವ ಪ್ರವಾಸಿಗರಿಗೆ ಅಪರಿಮಿತ ಆನಂದವನ್ನು ನೀಡುತ್ತದೆ. ಒಂದು ನಿಖರವಾದಂತಹ ತೇಜೋಮಂಡಲವನ್ನು ಸೃಷ್ಟಿಸುವ ಸಲುವಾಗಿ ಅರಣ್ಯದ ಒಳಭಾಗದಿಂದ ಪಾರದರ್ಶಕ ರೆಕ್ಕೆಯ ಕೀರಲು ದ್ವನಿಯ ಸಿಕಾಡಾಗಳು ಒಂದೇ ಸಮನಾಗಿ ಗುಂಯ್ ಗುಡುವ ಶಬ್ದ ಹಾಗೂ ಹಕ್ಕಿಗಳ ಸುಶ್ರಾವ್ಯವಾದ ಕೂಗುಗಳು, ತೊರೆಗಳ ಕಿಲಕಿಲನೆಯ ನಗು ಹಾಗೂ ವರ್ಷವಿಡೀ ಬತ್ತದ ನದಿಗಳ ಮೆಲು ದ್ವನಿಗಳು ಏಕಮೇಳವಾಗಿ ಮಿಶ್ರಣಗೊಳ್ಳುತ್ತವೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್18%. ಎಲ್ಲಾ ಇತರ ಚಟುವಟಿಕೆಗಳು ಹೆಚ್ಚುವರಿ ವೆಚ್ಚದಲ್ಲಿವೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%. ಎಲ್ಲಾ ಇತರ ಚಟುವಟಿಕೆಗಳು ಹೆಚ್ಚುವರಿ ವೆಚ್ಚದಲ್ಲಿವೆ.

ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಟೀ/ಕಾಫಿ ನೀಡಲಾಗುವುದು
ಪಕ್ಷಿಗಳ ವೀಕ್ಷಣೆ
ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳಿರಿ.
ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವುದಕ್ಕಾಗಿ ಕರೆ – ಟೀ/ಕಾಫೀ
ಪ್ರಕೃತಿಯಲ್ಲಿ ನಡಿಗೆ
ಗಮನಿಸುವುದು : ಜೀಪು ಸಫಾರಿ/ನೇಚರ್ ವಾಕ್ ಕುದುರೇಮುಖ ಪರ್ವತ ಶಿಖರಕ್ಕೆ ಟ್ರೆಕಿಂಗ್ – ಹೆಚ್ಚುವರಿ ಮೊತ್ತವನ್ನು ಪಾವತಿಸುವ ಷರತ್ತಿಗೆ ಒಳಪಡಿಸಿದಂತೆ.
ಬೆಳಗ್ಗಿನ ಉಪಹಾರ
ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು.
ಭಾರತೀಯ ಮಳೆಗಾಲವು ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ 2017ರಲ್ಲಿ ಅನೇಕ ದಾಖಲೆಗಳನ್ನು ಮುರಿದಿದ್ದಿತು. ಯಥಾ ಪ್ರಕಾರ, ಮಳೆಯ ಬಗ್ಗೆ ಚರ್ಚೆಯು ಕೇಂದ್ರ ಸ್ಥಾನವನ್ನು ಪಡೆದುಕೊಂಡಿತು. ವಿಪರೀತವಾದಂತಹ ಮಳೆಯೊಂದಿಗೆ, ಅಸಮರ್ಪಕವಾದಂತಹ ಮೂಲಸೌಕರ್ಯಗಳ ನೋವು ನಗರ ನಿವಾಸಿಗಳನ್ನು ಕಾಡುತ್ತದೆ. ಮಳೆಯು ಅತೀ ಕಡಿಮೆಯಾದಲ್ಲಿ ಬೆಳೆಗಳು ಅಪಾಯವನ್ನು ಎದುರಿಸುತ್ತವೆ. ಅದೇ ವರ್ಷದಲ್ಲಿ, ಒಂದು ಪ್ರಮುಖ ಹಬ್ಬವು ವಾರಾಂತ್ಯದ ಜೊತೆಗೆ ಬಂದಿದ್ದಿತು ಹಾಗೂ ನನಗೆ ಗೊತ್ತಿರುವ ಹಾಗೆ ಹೆಚ್ಚುಕಡಿಮೆ ಪ್ರತಿಯೋರ್ವರೂ ಒಂದಲ್ಲ ಒಂದು ಕಡೆಗೆ ಪ್ರಯಾಣ ಮಾಡುತ್ತಿದ್ದರು.
“ಮಳೆಯು ಕೃಪೆ/ಆಶೀರ್ವಾದ, ಮಳೆಯು ಭೂಮಿಗೆ ಒಂದು ಪ್ರಮುಖ ಅನುಗ್ರಹ, ಮಳೆಯೇ ಇಲ್ಲದೆ ಜೀವರಾಶಿಗಳು ಬದುಕಿರಲು ಸಾಧ್ಯವಿರುವುದಿಲ್ಲ” ಮೇಲಿನ ಹೇಳಿಕೆಯು ತಿಳಿಸಿರುವಂತೆ, ಮಳೆಯೇ ಇಲ್ಲದೆ ಜೀವರಾಶಿಗಳು ಬದುಕಿರಲು ಸಾಧ್ಯವಿರುವುದಿಲ್ಲ….. ನಾನು ಕಡಲತೀರದ ಪ್ರದೇಶಕ್ಕೆ ಸೇರಿದವನಾಗಿರುವುದರಿಂದ ಬಾಲ್ಯದಿಂದಲೂ ನನ್ನ ಬಹಳಷ್ಟು ಸಮಯವನ್ನು ಮಳೆಯೊಂದಿಗೆ ಕಳೆದಿರುವೆನು. ನಮಗೆ ಎರಡೇ ಕಾಲಗಳು, ಅವೆಂದರೆ ಮಳೆಗಾಲ ಮತ್ತು ಬೇಸಿಗೆ ಕಾಲ.
ಕರ್ನಾಟಕದ ಕುದುರೆಮುಖದಲ್ಲಿರುವಂತಹ ಭಗವತಿ ಪ್ರಕೃತಿ ಶಿಬಿರವು ಅತೀ ಸಮೀಪದ ಪಟ್ಟಣ ಕಳಸದಿಂದ 23 ಕಿಲೋಮೀಟರುಗಳ ದೂರದಲ್ಲಿರುವುದು. ಇದು, ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಕರ್ನಾಟಕ ಪರಿಸರಸ್ನೇಹಿ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿ (ಕೆಇಡಿಬಿ) ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್, ಇವರಿಂದ ನಡೆಸಲ್ಪಟ್ಟಂತಹ ನಮ್ಮ ಸ್ವಯಂಸೇವಕರ ತರಬೇತಿ ಕಾರ್ಯಕ್ರಮಕ್ಕೆ ಮೂಲ ತಾಣವಾಗಿದ್ದಿತು.