Banner Image

ಸ್ನೋರ್ಕೆಲಿಂಗ್

ಅವಲೋಕನ

ಸ್ನಾರ್ಕಿಲ್ಲಿಂಗ್, ಇದು ಉಸಿರು ಕೊಳವೆಯನ್ನು ಅಳವಡಿಸಿಕೊಂಡು ಸಂಪೂರ್ಣ ದೇಹವು ನೀರಿನೊಳಗೆ ಇರುವಂತೆ ನೋಡಿಕೊಂಡು ಈಜುವ ಒಂದು ಪ್ರಕ್ರಿಯೆಯಾಗಿರುತ್ತದೆ. ಈ ಉಪಕರಣವನ್ನು ಬಳಸಿಕೊಂಡು ನೀರಿನೊಳಗೆ ಈಜಾಡುವವರು ನೀರಿನೊಳಗಿನ ಆಕರ್ಷಣೆಗಳನ್ನು ನೋಡಬಹುದು. ಇದು ಒಂದು ಮನೋರಂಜನೆ ಚಟುವಟಿಕೆ ಎಂಬುದಾಗಿ ಚಿರಪರಿಚಿತವಾಗಿರುತ್ತದೆ, ಅದರಲ್ಲೂ ವಿಶೇಷವಾಗಿ ಉಷ್ಣವಲಯದ ರೆಸಾರ್ಟುಗಳಲ್ಲಿ ಹಾಗೂ ಸ್ಕೂಬಾ ಡೈವಿಂಗ್ ಸ್ಥಳಗಳಲ್ಲಿ ತುಂಬಾ ಪ್ರಚಲಿತದಲ್ಲಿರುತ್ತದೆ.  ಸ್ಕೂಬಾ ಡೈವರುಗಳು ನೀರಿನ ಮೇಲಿರುವಾಗಲೂ ಸ್ನಾರ್ಕೆಲ್ಲಿಂಗನ್ನು ಬಳಸುತ್ತಾರೆ ಹಾಗೂ ರಕ್ಷಣಾ ತಂಡಗಳು  ಒಂದು ನೀರು ಆಧಾರಿತ ಹುಡುಕುವಿಕೆಗೆ ಸ್ನಾರ್ಕೆಲ್ಲಿಂಗನ್ನು ಬಳಸುತ್ತಾರೆ. ಸ್ನಾರ್ಕೆಲ್ಲಿಂಗ್ ಮೂಲಕ ನೀರಿನ ಒಳಗಿನ ಸಮುದ್ರ ಜೀವಿಗಳನ್ನು ನೋಡಿ ಆನಂದಿಸಬಹುದು. ಲೇಡಿ ಸಮುದ್ರ ತೀರದಲ್ಲಿ ಸ್ನಾರ್ಕೆಲ್ಲಿಂಗ್  ಒಂದು ವಿಶಿಷ್ಠ ಜೀವಮಾನದ ಅನುಭವವನ್ನು ನೀಡುತ್ತದೆ.

ಪ್ರವಾಸವು ದೇವಬಾಗ ದ್ವೀಪದಿಂದ ಲೇಡಿ ಕಡಲತೀರಕ್ಕೆ ಹಾಗೂ ಹಿಂತಿರುಗುವಿಕೆ ದೋಣಿ ವಿಹಾರವನ್ನು ಒಳಗೊಂಡಿರುತ್ತದೆ. ನಿಮ್ಮ ಸ್ನಾರ್ಕಲ್ಲಿಂಗ್ ವೇಳೆಯಲ್ಲಿ ಲೈಫ್ ರಿಂಗ್ ಅಥವಾ ಜಾಕೇಟುಗಳನ್ನು ಒದಗಿಸಲಾಗುವುದು. ನೀವು ಸ್ನಾರ್ಕಲ್ಲಿಂಗ್ ಮಾಡುವ ವೇಳೆಯಲ್ಲಿ ಓರ್ವ ಮಾರ್ಗದರ್ಶಕರು ನಿಮಗೆ ಸಹಾಯ ಮಾಡುತ್ತಾರೆ. ಈಜುವ ಚತುರತೆಯು ಸಹಾಯಕವಾಗಬಹುದಾದರೂ, ಈ ಚಟುವಟಿಕೆಯನ್ನು ಕೈಗೊಳ್ಳಲು ನಿಮಗೆ ಈಜುವ ಚತುರತೆಯ ಅಗತ್ಯತೆಯಿರುವುದಿಲ್ಲ,  ನೀವು ಬಹಳಷ್ಟು ಸಂಖ್ಯೆಯ ಬಣ್ಣ ಬಣ್ಣದ ಮೀನುಗಳನ್ನು, ಕೊರಲ್ ಗಳು ಮತ್ತಿತರ ಮತ್ಯ ಚಟುವಟಿಕೆಗಳನ್ನು ನೋಡುವ ಅವಕಾಶ ಸಿಗುವುದು.

ರೆಸಾರ್ಟ್‌ಗಳಲ್ಲಿ ಚಟುವಟಿಕೆ

ದೇವ್‌ಬಾಗ್ ಬೀಚ್ ರೆಸಾರ್ಟ್

₹ 1,000

ರೆಸಾರ್ಟ್

ಫೇಸ್ಬುಕ್

ಟ್ವಿಟರ್

ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

Top

img
img